ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಯುವಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದು, ಆತನ ಹೃದಯವನ್ನು ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಅಪಘಾತದಲ್ಲಿ ಮಿದುಳಿಗೆ ಗಾಯವಾಗಿದ್ದ 28 ವರ್ಷದ ಯುವಕನೊಬ್ಬ ಮೈಸೂರಿನಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಚಿಕಿತ್ಸೆ ನೀಡಿದ ವೈದ್ಯರು ಗುರುವಾರ (ಆ.15) ಆತನ ಮಿದುಳು ನಿಷ್ಕ್ರಿಯವಾಗಿರುವುದಾಗಿ ಘೋಷಿಸಿದರು.

ಬಳಿಕ ವ್ಯಕ್ತಿಯ ಕುಟುಂಬದ ಸದಸ್ಯರ ಅನುಮತಿಯ ಮೇರೆಗೆಹೃದಯವನ್ನು ಆಂಬುಲೆನ್ಸ್ನಲ್ಲಿ ಹಸಿರು ಕಾರಿಡಾರ್ ಮೂಲಕ ನಗರದನಾರಾಯಣ ಹೆಲ್ತ್ ಸಿಟಿಗೆ ಸಾಗಿಸಲಾಯಿತು. 170ಕಿ.ಮೀ. ಅಂತರವನ್ನು ಆಂಬುಲೆನ್ಸ್ 2ಗಂಟೆ 15 ನಿಮಿಷದಲ್ಲಿ ತಲುಪಿತು.

ಬಾಗಲಕೋಟೆಯ 38 ವರ್ಷದ ವ್ಯಕ್ತಿಯುಹೃದಯ ಸಂಬಂಧಿ ಕಾಯಿಲೆ ಸಲುವಾಗಿ ನಾರಾಯಣ ಹೆಲ್ತ್ ಸಿಟಿಯಲ್ಲಿ 9 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆಗೆ ಹೃದಯ ಕಸಿಯೊಂದೇ ಪರಿಹಾರ ಎಂದು ವೈದ್ಯರು ಸೂಚಿಸಿದ್ದರು. ಜೀವ ಸಾರ್ಥಕತೆ ಯೋಜನೆಯಡಿ ಹೆಸರು ನೋಂದಾಯಿಸಿದ್ದರೂ ಹೊಂದಾಣಿಕೆಯಾಗುವ ಹೃದಯ ಸಿಕ್ಕಿರಲಿಲ್ಲ. ಅದೃಷ್ಟವಶಾತ್ 28 ವರ್ಷದ ವ್ಯಕ್ತಿಯ ಹೃದಯ ಹೊಂದಾಣಿಕೆಯಾದ್ದರಿಂದ ವೈದ್ಯರು ಯಶಸ್ವಿಯಾಗಿ ಹೃದಯ ಕಸಿ ಮಾಡಿದರು.

ವ್ಯಕ್ತಿಯು ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯ ಫಲಾನುಭವಿಯಾಗಿದ್ದರಿಂದ ಚಿಕಿತ್ಸೆಯೂ ರಿಯಾಯಿತಿ ದರದಲ್ಲಿ ದೊರೆತಿದೆ.ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞ ಡಾ. ಜೂಲಿಯಸ್ ಪುನ್ನೆನ್, ಡಾ. ವರುಣ್ ಶೆಟ್ಟಿ, ಡಾ.ಎಸ್. ಶಶಿರಾಜ್ ಹೃದಯ ಕಸಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.