ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಬಿರುಗಾಳಿ ಸಹಿತ ಮಳೆ: ಮರಗಳು ಧರೆಗೆ

ವಾಹನಗಳ ಸಂಚಾರಕ್ಕೆ ಅಡ್ಡಿ
Published : 29 ಸೆಪ್ಟೆಂಬರ್ 2024, 16:24 IST
Last Updated : 29 ಸೆಪ್ಟೆಂಬರ್ 2024, 16:24 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ವಿವಿಧೆಡೆ ಶನಿವಾರ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಆರ್‌.ಟಿ.ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದಿವೆ.

ಶನಿವಾರ ರಾತ್ರಿ 8.30ರಿಂದ ಭಾನುವಾರ ಬೆಳಿಗ್ಗೆ 8.30ರವರೆಗಿನ ಮಳೆ ಮಾಹಿತಿ ಪ್ರಕಾರ, ಮಹದೇವಪುರ ವಲಯದ ದೊಡ್ಡ ನೆಕ್ಕುಂದಿಯಲ್ಲಿ 10.7 ಸೆಂ.ಮೀ ಮಳೆಯಾಗಿದೆ. ಇದೇ ವಲಯದ ಎಚ್‌ಎಎಲ್‌ ವಿಮಾನ ನಿಲ್ದಾಣ, ಹಗದೂರು, ವರ್ತೂರು ಸುತ್ತಮುತ್ತ 8 ಸೆಂ.ಮೀಗೂ ಹೆಚ್ಚು ಮಳೆಯಾದ ವರದಿಯಾಗಿದೆ.

ಮಾರತ್ತಹಳ್ಳಿಯಲ್ಲಿ 6.2 ಸೆಂ.ಮೀ, ಗೊಟ್ಟಿಗೆರೆ, ಬೇಗೂರು ವ್ಯಾಪ್ತಿಯಲ್ಲಿ 4.3 ಸೆಂ.ಮೀ, ವಿಜ್ಞಾನನಗರ, ಬೆಳ್ಳಂದೂರು, ಜಕ್ಕೂರು, ಹೊರಮಾವು ಮತ್ತು ವಿ.ನಾಗೇನಹಳ್ಳಿಯಲ್ಲಿ 3.3 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ದೊಮ್ಮಲೂರು, ಹೂಡಿ, ಬೆನ್ನಿಗಾನಹಳ್ಳಿ, ರಾಮಮೂರ್ತಿ ನಗರದಲ್ಲಿ 1.9 ಸೆಂ,ಮೀ, ಜಕ್ಕೂರು, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ 1.7 ಸೆಂ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಆರ್‌.ಟಿ.ನಗರದ 14ನೇ ಕ್ರಾಸ್‌ ರಸ್ತೆಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಜಖಂಗೊಂಡಿದೆ. ಬಿಬಿಎಂಪಿ ಸಿಬ್ಬಂದಿ, ಭಾನುವಾರ ಬೆಳಿಗ್ಗೆ ಉರುಳಿಬಿದ್ದ ಮರಗಳ ತೆರವು ಕಾರ್ಯಾಚರಣೆ ಕೈಗೊಂಡರು.

ಚನ್ನಸಂದ್ರ, ಜೆ.ಬಿ.ನಗರದಲ್ಲಿ ನೀರು ನಿಂತಿದ್ದರಿಂದ ತಿರುಮಲಶೆಟ್ಟಿ ಕ್ರಾಸ್ ಕಡೆಗೆ ಸಂಚಾರ ನಿಧಾನಗತಿಯಲ್ಲಿತ್ತು. ಎಚ್‌ಎಸ್‌ಬಿಸಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಅರೆಕೆರೆ ಕಡೆಗೆ ನಿಧಾನಗತಿಯ ಸಂಚಾರವಿತ್ತು.

ಎಚ್‌ಎಸ್‌ಬಿಸಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಅರೆಕೆರೆ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಚಲಿಸಿದವು 
ಎಚ್‌ಎಸ್‌ಬಿಸಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಅರೆಕೆರೆ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಚಲಿಸಿದವು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT