ಬೆಂಗಳೂರು: ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಅಪರಿಚಿತ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಹೆಬ್ಬಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಶನಿವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಮೃತರಿಗೆ ಸುಮಾರು 28 ವರ್ಷ ವಯಸ್ಸಾಗಿದೆ. ಅವರು ಬಸ್‌ಗಾಗಿ ಕಾದು ಕುಳಿತಿದ್ದರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶನಿವಾರ ರಾತ್ರಿ ಮಳೆ ಸುರಿಯುತ್ತಿತ್ತು. ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹಾಕಲಾಗಿದ್ದ ಲೋಹದ ಆಸನದ ಮೇಲೆಮೃತ ಯುವಕನ ಜೊತೆ ಇನ್ನೂ ಮೂವರು ಕುಳಿತಿದ್ದರು. ವಿದ್ಯುತ್ ಸ್ಪರ್ಶದ ಅನುಭವವಾಗಿದ್ದರಿಂದ ಅವರು ಅಲ್ಲಿಂದ ದೂರ ಓಡಿಹೋಗಿದ್ದರು. ಚಪ್ಪಲಿ ಕೆಳಗೆ ಬಿಟ್ಟಿದ್ದ ಯುವಕ ಅದನ್ನು ಹಾಕಿಕೊಂಡು ಓಡಲು ಮುಂದಾದಾಗ ನಿಲ್ದಾಣದ ಬಳಿಯ ಫಲಕವೊಂದಕ್ಕೆ ಕೈ ತಾಗಿತ್ತು. ಆಗ ಆತನ ದೇಹದೊಳಗೆ ವಿದ್ಯುತ್ ಪ್ರವಹಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

ಅಕ್ರಮ ಜಾಹೀರಾತು ಫಲಕದಿಂದ ಅವಘಡ: ‘ಟೈಮ್ಸ್ ಇನೋವೇಟಿವ್ ಮೀಡಿಯಾ ಹೆಸರಿನ ಜಾಹೀರಾತು ಕಂಪನಿಯೊಂದು ನಿಲ್ದಾಣದ ಸಮೀಪದ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ನಿಲ್ದಾಣದ ಸುತ್ತಲೂ ಜಾಹೀರಾತು ಫಲಕ ಅಳವಡಿಸಿದೆ. ಆಫಲಕದ ತಂತಿಯಿಂದ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ’ ಎಂದು ಹೆಬ್ಬಾಳ ವಿಭಾಗದ ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಾಹೀರಾತು ಫಲಕಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು 2020ರ ಡಿಸೆಂಬರ್‌ನಲ್ಲೇ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಕಂಪನಿಯು ಜಾಹೀರಾತು ಫಲಕ ಅಳವಡಿಸಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿಲ್ಲ. ಜಾಹೀರಾತು ಸಂಸ್ಥೆಯ ವಿರುದ್ಧ ನಾವು ದೂರು ದಾಖಲಿಸುತ್ತೇವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.