ಬೆಂಗಳೂರು: ‘ಬನಶಂಕರಿಯ ಎರಡನೇ ಹಂತದ 24ನೇ ಅಡ್ಡರಸ್ತೆಗೆ ರಂಗಕರ್ಮಿ ದಿವಂಗತ ಮಾಸ್ಟರ್ ಹಿರಣ್ಣಯ್ಯ ಅವರ ಹೆಸರನ್ನು ಇಡಲಾಗುವುದು’ ಎಂದು ಶಾಸಕ ಆರ್.ಅಶೋಕ ಹೇಳಿದರು.

ನಗರದಲ್ಲಿ ಹಿರಣ್ಣಯ್ಯ ಅಭಿಮಾನಿಗಳು ಶನಿವಾರ ಆಯೋಜಿಸಿದ್ದ ‘ಶ್ರದ್ಧಾಂಜಲಿ ಸಭೆ’ಯಲ್ಲಿ ಅವರು ಮಾತನಾಡಿದರು.

ಸಾಹಿತಿ ಅ.ರಾ.ಮಿತ್ರ, ‘ಕನ್ನಡ ರಂಗಭೂಮಿಗೆ ಮಾಸ್ಟರ್ ಹಿರಣ್ಣಯ್ಯ ಅವರಕೊಡುಗೆ ಅಪಾರ. ಅವರು ಅನನ್ಯ ವ್ಯಕ್ತಿಯಷ್ಟೇ ಆಗಿರಲಿಲ್ಲ, ವಿಶ್ವವಿದ್ಯಾಲಯವಾಗಿದ್ದರು’ ಎಂದರು. ವಾಗ್ಮಿ ವೈ.ವಿ.ಗುಂಡೂರಾವ್ ಅವರು ನುಡಿನಮನ ಸಲ್ಲಿಸಿದರು.

ಕವಿ ಎಚ್.ಎಸ್.ವೆಂಕಟೇಶಮೂರ್ತಿ, ನಿರ್ದೇಶಕ ಬಿ.ವಿ.ರಾಜಾರಾಮ್ ಮತ್ತಿತರರು ಹಿರಣ್ಣಯ್ಯ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಹಿರಣ್ಣಯ್ಯ ಕುಟುಂಬದ ಸದಸ್ಯರು ಪೊಲೀಸ್ ಕಲ್ಯಾಣ ನಿಧಿಗೆ ಲಕ್ಷ ರೂಪಾಯಿ ದೇಣಿಗೆ ನೀಡಿದರು. ‘ನಾನು ಮಾಸ್ಟರ್ ಹಿರಣ್ಣಯ್ಯ’ ನಾಟಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.