ಬೆಂಗಳೂರು: ಜಾನಪದ ಹಾಡುಗಳ ರಚನೆ ಮತ್ತು ಗಾಯನದ ಮೂಲಕ ನಾಡಿನಾದ್ಯಾಂತ ಮನೆಮಾತಾಗಿರುವ ಗುರುರಾಜ್ ಹೊಸಕೋಟೆ ಅವರಿಗೆ ಅಭಿ ಮಾನಿಗಳು, ಒಡನಾಡಿಗಳು, ಆಪ್ತರು
ಅಭಿಮಾನದ ಗೌರವವನ್ನು ಸಮರ್ಪಿಸಿ ದರು. ಈ ಮೂಲಕ ಅವರ 75ನೇ ಜನ್ಮದಿನದ ಸಂಭ್ರಮ ಹೆಚ್ಚಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ನಗರ ದಲ್ಲಿ ಮಂಗಳವಾರ ಆಯೋಜಿಸಿದ ‘ಪದ ಜನಪದ ಮಾಡಿ ನಾಡಿಗೆ ನೀಡಿದವರಿಗೆ 75 ವರುಷ’ ಕಾರ್ಯಕ್ರಮದಲ್ಲಿ ಗುರುರಾಜ್ ಹೊಸಕೋಟೆ ಅವರ ಜಾನಪದ ಕ್ಷೇತ್ರದ ಸಾಧನೆಗಳನ್ನು ಗುಣಗಾನ ಮಾಡಲಾಯಿತು.

ಜಾನಪದ ಗಾಯಕ ಶಬ್ಬೀರ್ ಡಾಂಗೆ, ‘ಗಾಯನದ ಮೂಲಕ ಜನರನ್ನು ಮೋಡಿ ಮಾಡುವ ತಾಕತ್ತು ಗುರುರಾಜ್ ಹೊಸಕೋಟೆ ಅವರಿಗಿದೆ. ಅವರ ಪರಂಪರೆಯನ್ನು ಉಳಿಸಿ, ಬೆಳಸ
ಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಹೊಸ ಕಲಾವಿದರು ಬಂದಿದ್ದಾರೆ. ಆದರೆ, ಜಾನಪದ ಕಲೆಯ ಗಂಭೀರತೆ ಅವರಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜಗಳೂರು ಲಕ್ಷ್ಮಣ ರಾವ್, ‘ಕುಟುಂಬದ ಬಳುವಳಿಯಾಗಿ ಬಂದಿದ್ದ ಹಾಡುಗಾರಿಯನ್ನು ಮೈಗೂಡಿಸಿಕೊಂಡಿದ್ದ ಗುರುರಾಜ್ ಹೊಸಕೋಟೆ ಅವರು, 600ಕ್ಕೂ ಅಧಿಕ ಧ್ವನಿ ಸುರುಳಿಗೆ ಸಾಹಿತ್ಯ, ಸಂಗೀತ ಹಾಗೂ ಕಂಠವನ್ನು ಒದಗಿಸಿದ್ದಾರೆ. ಅವರನ್ನು ತಡವಾಗಿ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಕನ್ನಡ ಭವನ ಸುತ್ತುತ್ತಿರುವವರಿಗೆ ಪ್ರಶಸ್ತಿಗಳು ದೊರೆಯುತ್ತಿವೆ’ ಎಂದು ಹೇಳಿದರು.

‘ಗಡಿ ವಿಚಾರವಾಗಿ ಮಹಾರಾಷ್ಟ್ರದವರು ಅನಗತ್ಯವಾಗಿ ಕೆಣಕುತ್ತಿದ್ದಾರೆ. ನಾವು ಯಾವುದೇ ಹೋರಾಟಕ್ಕೂ ಸಿದ್ಧವಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.