ಬೆಂಗಳೂರು: ಕೋಮು ಸೌಹಾರ್ದತೆ ಮತ್ತು ನ್ಯಾಯದ ಕುರಿತು ಉಪನ್ಯಾಸ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಬುಧವಾರ ಬಂದಿದ್ದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಪ್ರವೇಶ ನಿರಾಕರಿಸಲಾಯಿತು.

ಅಧ್ಯಾಪಕರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ ಬಳಿಕ ಪ್ರವೇಶ ನೀಡಲಾಯಿತು. ಆದರೆ, ನಿಗದಿತ ಸ್ಥಳವಾದ ’ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಎಜುಕೇಷನ್’ನಲ್ಲಿ (ಸಿಸಿಇ) ಉಪನ್ಯಾಸ ನಡೆಯದೇ ಕ್ಯಾಂಪಸ್ನ ಬೇರೆ ಸ್ಥಳದಲ್ಲಿ ನಡೆಸಲಾಯಿತು.

ಒಂದು ವಾರದ ಹಿಂದೆಯೇ ಕುಲಸಚಿವರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳಿಗೆ ಇ–ಮೇಲ್ ಮೂಲಕ ವಿದ್ಯಾರ್ಥಿಗಳ ಸಂಘಟನೆಯಾದ ’ಬ್ರೇಕ್ ದ ಸೈಲನ್ಸ್’ಅನುಮತಿ ಕೋರಿತ್ತು. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕಾರ್ಯಕ್ರಮಕ್ಕಿಂತ ಮೂರು ತಾಸು ಮೊದಲು ಕುಲಸಚಿವರು ನಮ್ಮನ್ನು ಕರೆದು, ‘ಸಿಸಿಇಯಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಸಂಸ್ಥೆಯ ನಿರ್ದೇಶಕರು ಕಚೇರಿಯಲ್ಲಿ ಇಲ್ಲದ ಕಾರಣ ಇ–ಮೇಲ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು’ ಎಂದು ಸಂಘಟಕ, ವಿದ್ಯಾರ್ಥಿ ಸೇನ್ಗುಪ್ತಾ ತಿಳಿಸಿದ್ದಾರೆ.

ಸಿಸಿಇಯಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ದೊರೆಯದ ಕಾರಣ ಕೆಫೆಟೇರಿಯಾದಲ್ಲಿ ಅನೌಪಚಾರಿಕವಾಗಿ ನಡೆಸಲು ನಿರ್ಧರಿಸಲಾಯಿತು. ತೀಸ್ತಾ ಅವರು ಬಂದಾಗ ಐವರು ಭದ್ರತಾ ಸಿಬ್ಬಂದಿ ತಡೆದರು. ಬಳಿಕ ಅಧ್ಯಾಪಕರು ಮಧ್ಯಪ್ರವೇಶಿಸಿ, ತೀಸ್ತಾ ಸೆಟಲ್ವಾಡ್ ನಮ್ಮ ಅತಿಥಿ ಎಂದು ತಿಳಿಸಿದ ಮೇಲೆ ಕ್ಯಾಂಪಸ್ ಪ್ರವೇಶಿಸಲು ಅವಕಾಶ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗೇಟ್ವರೆಗೆ ಬಂದು ಹಿಂತಿರುಗಬೇಕಾಯಿತು. ಸಂಜೆ 6ರಿಂದ ರಾತ್ರಿ 8ರವರೆಗೆ ವಿದ್ಯಾರ್ಥಿಗಳೊಂದಿಗೆ ತೀಸ್ತಾ ಸಂವಾದ ನಡೆಸಿದರು ಎಂದು ಸೆನ್ಗುಪ್ತಾ ಮಾಹಿತಿ ನೀಡಿದರು.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಕುರಿತು ಚರ್ಚೆಯನ್ನು ಎರಡು ತಿಂಗಳ ಹಿಂದೆ ಆಯೋಜಿಸುವಾಗಲೂ ಅನುಮತಿಯನ್ನು ನಿರಾಕರಿಸಿದ್ದು ವಿವಾದವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.