ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಫೆ.24ರಂದು ಮುಕ್ತ ದಿನ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಕ್ಯಾಂಪಸ್ ಪ್ರವೇಶಿಸಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಇರಲಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಐಐಎಸ್ಸಿ ಕ್ಯಾಂಪಸ್ ಪ್ರವೇಶಿಸಿ ಮುಕ್ತ ದಿನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿರುವ ಎಲ್ಲ ವಿಭಾಗಗಳ ಚಟುವಟಿಕೆ, ಆವಿಷ್ಕಾರ ಹಾಗೂ ಇತರೆ ಮಾಹಿತಿ ಮುಕ್ತ ದಿನದಲ್ಲಿ ಲಭ್ಯವಾಗಲಿದೆ. ವಿಜ್ಞಾನ ಪ್ರಯೋಗಗಳು, ವಿಜ್ಞಾನದ ಪಾಠಗಳು, ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನವೂ ಮುಕ್ತ ದಿನದಲ್ಲಿ ಇರಲಿದೆ.

‘1909ರಲ್ಲಿ ಐಐಎಸ್ಸಿ ಸ್ಥಾಪನೆಯಾಗಿದೆ. ಸಂಸ್ಥೆಯ ಚಟುವಟಿಕೆ ಹಾಗೂ ಸೌಲಭ್ಯಗಳನ್ನು ತೆರೆದಿಡಲು ಮುಕ್ತ ದಿನ ಹಮ್ಮಿಕೊಳ್ಳಲಾಗಿದೆ. ವಿಜ್ಞಾನದ ಆವಿಷ್ಕಾರ ಹಾಗೂ ಸಂಶೋಧನೆಗಳ ಬಗ್ಗೆಯೂ ಮುಕ್ತ ದಿನದಲ್ಲಿ ಮಾಹಿತಿ ಇರಲಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಐಐಎಸ್ಸಿ ಕ್ಯಾಂಪಸ್‌ಗೆ ಬರಲು ಆಹ್ವಾನ ನೀಡುತ್ತಿದ್ದೇವೆ’ ಎಂದು ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ತಿಳಿಸಿದ್ದಾರೆ.

ವಾಹನ ನಿಲುಗಡೆ ನಿಷೇಧ: ಮುಕ್ತ ದಿನದಲ್ಲಿ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ದಟ್ಟಣೆ ಉಂಟಾಗದಂತೆ ತಡೆಯಲು ಹಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

‘ಸರ್ ಸಿ.ವಿ.ರಾಮನ್ ರಸ್ತೆ (ಮೇಖ್ರಿ ವೃತ್ತದಿಂದ ಬಿಎಚ್‌ಇಎಲ್ ವೃತ್ತ), ನ್ಯೂ ಬಿಇಎಲ್ ರಸ್ತೆ (ಸದಾಶಿವನಗರ ಪಿ.ಎಸ್. ಜಂಕ್ಷನ್‌ನಿಂದ ರೈಲ್ವೆ ಸೇತುವೆ), ಟಿ. ಚೌಡಯ್ಯ ರಸ್ತೆ (ಸಿ.ಎನ್.ಆರ್.ರಾವ್ ಕೆಳಸೇತುವೆಯಿಂದ ಕಾವೇರಿ ಜಂಕ್ಷನ್) ಹಾಗೂ ಮಾರ್ಗೋಸಾ ರಸ್ತೆಯಲ್ಲಿ (ಮಾರಮ್ಮ ದೇವಸ್ಥಾನ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್‌ವರೆಗೆ) ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

‘ಮಹಾರಾಣಿ ಅಮ್ಮಣಿ ಕಾಲೇಜು ಎದುರಿನ ಮೈದಾನ ಹಾಗೂ ಐಐಎಸ್ಸಿ ಜಮ್‌ಖಾನ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.