ಬೆಂಗಳೂರು: ಗಂಭೀರ ಸ್ವರೂಪದ 15 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮಹಮ್ಮದ್ ಶಾಬಾಜ್ನನ್ನು(27) ಗೋವಿಂದಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಸರ್ವಜ್ಞನಗರದ ಶಾಂಪುರ ಮುಖ್ಯರಸ್ತೆಯ ನಿವಾಸಿ ಆಗಿರುವ ಮಹಮ್ಮದ್ ಶಾಬಾಜ್, ಗೋವಿಂದಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಕೊಲೆ, ಕೊಲೆಗೆ ಪ್ರಯತ್ನ, ಹಲ್ಲೆ, ದರೋಡೆ ಮಾಡಲು ಸಿದ್ಧತೆ ಮಾಡಿಕೊಳ್ಳುವುದು, ಅಪಹರಣ ಸೇರಿದಂತೆ ಗಂಭೀರ ಸ್ವರೂಪದ 15 ಪ್ರಕರಣಗಳಲ್ಲಿ ಶಾಬಾಜ್ ಭಾಗಿ ಆಗಿದ್ದ. ಆರು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗೆಯಾಗಿ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ಓಡಾಟ ನಡೆಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಪ್ರತಿಬಂಧಕ ಕಾಯ್ದೆಯಡಿ ರೌಡಿಶೀಟರ್ನನ್ನು ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು. ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.