ಬೆಂಗಳೂರು: ಚಿನ್ನಾಭರಣ ವ್ಯಾಪಾರ ಸಂಸ್ಥೆ ಜೋಯಾಲುಕ್ಕಾಸ್ ಬುಧವಾರದಿಂದ ‘ವಜ್ರಾಭರಣಗಳ ಪ್ರದರ್ಶನ’ವನ್ನು ಆರಂಭಿಸಿದೆ.

ನಗರದ ಎಂ.ಜಿ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಸೆಪ್ಟೆಂಬರ್ 1ರವರೆಗೂ ಪ್ರದರ್ಶನ ನಡೆಯಲಿದೆ.

‘ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ವಜ್ರಾಭರಣಗಳು ಮತ್ತು ವಜ್ರಗಳೂ ಈ ಪ್ರದರ್ಶನದಲ್ಲಿ ಇವೆ. ಈ ವಜ್ರಗಳು ಕುಶಲಕರ್ಮಿಗಳ ಕುಸುರಿ ಕೆಲಸಕ್ಕೆ ಕನ್ನಡಿ ಹಿಡಿದಂತಿವೆ. ಕಚ್ಚಾರೂಪದ ‘ಅನ್‌ಕಟ್’ ವಜ್ರಗಳು, ಅತ್ಯಪರೂಪದ ವಜ್ರಗಳು, ಅಪರೂಪದ ವಜ್ರಾಭರಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ’ ಎಂದು ಜೋಯಾಲುಕ್ಕಾಸ್ ತಿಳಿಸಿದೆ.

‘ಪ್ರದರ್ಶನದಲ್ಲಿ ₹1 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸುವವರಿಗೆ 1 ಗ್ರಾಂನಷ್ಟು ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುತ್ತದೆ’ ಎಂದು ಸಂಸ್ಥೆ ಹೇಳಿದೆ.

ಗೃಹ ಸಚಿವ ಜಿ.ಪರಮೇಶ್ವರ ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಪ್ರದರ್ಶನವನ್ನು ಉದ್ಘಾಟಿಸಿ, ‘ಪ್ರದರ್ಶನದಲ್ಲಿ ಸಾಂಪ್ರದಾಯಿಕ ಶೈಲಿ ಮತ್ತು ವಿನ್ಯಾಸದ ವಜ್ರಾಭರಣಗಳಿದ್ದು, ಅವು ಆಕರ್ಷಕವಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.