ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಸ್ತಿಮಜ್ಜೆ ಕಸಿ ಘಟಕದ (ಬೋನ್‌ಮ್ಯಾರೋ ಟ್ರಾನ್ಸ್ ಪ್ಲಾಂಟ್) ಸಾಧನೆಯನ್ನು ಗುರುತಿಸಿ ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು ವಲಯ-2 ‘ಎಲ್‌ಐಸಿ ಸುವರ್ಣ ಮಹೋತ್ಸವ ಫೌಂಡೇಷನ್’ ₹ 1 ಕೋಟಿ ಪ್ರೋತ್ಸಾಹಧನ ನೀಡಿದೆ.

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿರುವ ಅಸ್ತಿಮಜ್ಜೆ ಕಸಿ ಘಟಕವು 100 ಯಶಸ್ವಿ ಅಸ್ತಿಮಜ್ಜೆ ಕಸಿ ಚಿಕಿತ್ಸೆ ನಡೆಸಿದೆ. ಈ ಸಾಧನೆಗಾಗಿ ಎಲ್‌ಐಸಿ ಪ್ರೋತ್ಸಾಹಧನ ನೀಡುತ್ತಿದೆ. ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ. ನವೀನ್ ಭಟ್, ಎಲ್‌ಐಸಿ ಹೈದರಾಬಾದ್ ದಕ್ಷಿಣ ಕೇಂದ್ರ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಜಿ.ವಿ. ರಾಮಯ್ಯ ಅವರು ಪ್ರೋತ್ಸಾಹದ ಪತ್ರಕ್ಕೆ ಪರಸ್ಪರ ಸಹಿ ಹಾಕಿದರು.

ಎಲ್‌ಐಸಿ ಬೆಂಗಳೂರು ದಕ್ಷಿಣ ಕೇಂದ್ರ ವಲಯದ ಪ್ರಾದೇಶಿಕ ವ್ಯವಸ್ಥಾಪಕ (ಮಾರುಕಟ್ಟೆ ವಿಭಾಗ) ರವಿಕುಮಾರ್, ಎಲ್‌ಐಸಿ ದಕ್ಷಿಣ ಕೇಂದ್ರ ವಿಭಾಗದ ವಲಯ ವ್ಯವಸ್ಥಾಪಕ ಪುನೀತ್ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ. ನವೀನ್, ವೈದ್ಯಕೀಯ ಗಂಥಿ ವಿಜ್ಞಾನ ವಿಭಾಗದದ ಮುಖ್ಯಸ್ಥ ಡಾ.ಸುರೇಶ್ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.