ಬೆಂಗಳೂರು: ಹಲವಾರು ವಿಶೇಷತೆಗಳಿಗೆ ಕಾರಣವಾದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಮತ್ತಷ್ಟು ತಾಂತ್ರಿಕ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದೆ.

ಇದೇ ಮೊದಲ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣದ ನೂತನ ರನ್‍ವೇನಲ್ಲಿ ದೇಸಿಯವಾಗಿ ಅಭಿವೃದ್ಧಿಪಡಿಸಲಾದ ವೈಮಾನಿಕ ಹವಾಮಾನ ನಿರೀಕ್ಷಣಾ ವ್ಯವಸ್ಥೆ (ಎಡಬ್ಲ್ಯುಎಂಎಸ್) ಅಳವಡಿಸಲಾಗಿದೆ.

ಇದರೊಂದಿಗೆ ಸ್ವದೇಶಿ ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನೂತನ ರನ್‍ವೇ ಎರಡೂ ತುದಿಗಳಲ್ಲಿಈ ಸಾಧನಗಳನ್ನು ಅಳವಡಿಸಲಾಗಿದೆ.

ಹವಾಮಾನ ನಿರೀಕ್ಷಣಾ ವ್ಯವಸ್ಥೆ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ನ್ಯಾಷನಲ್ ಏರೊಸ್ಪೇಸ್ ಲ್ಯಾಬೋರೇಟರೀಸ್‌ನ (ಎನ್ಎಎಲ್) ಸಿಎಸ್ಐಆರ್ ವಿಭಾಗ ಅಭಿವೃದ್ಧಿಪಡಿಸಿದೆ.

ರನ್‌ವೇ ಮೇಲೆ ‘ದೃಷ್ಟಿ’

ಅಷ್ಟೇ ಅಲ್ಲ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಹಯೋಗದಲ್ಲಿ ಎನ್‌ಎಎಲ್ ಸ್ಥಳೀಯವಾಗಿಟ್ರಾನ್ಸ್ ಮಿಸ್ಸೊ ಮೀಟರ್ ಅಭಿವೃದ್ಧಿಪಡಿಸಿದೆ.

ಇದು ವಿಮಾನ ಸಂಚರಿಸುವ ರನ್‍ವೇನಲ್ಲಿ ದೃಶ್ಯ ಸಾಧ್ಯತೆ ಪ್ರಮಾಣ(ರನ್‍ವೇ ವಿಸಿಬಿಲಿಟಿ ರೇಂಜ್-ಆರ್‌ವಿಆರ್) ಅಳೆಯುವ ಸಾಧನ. ‘ದೃಷ್ಟಿ’ ಹೆಸರಿನ ನಾಲ್ಕು ಟ್ರಾನ್ಸ್‌ಮಿಸ್ಸೊ ಮೀಟರ್‌ಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇನಲ್ಲಿ ಅಳವಡಿಸಲಾಗಿದೆ.

ಇದರೊಂದಿಗೆಬೆಂಗಳೂರು ವಿಮಾನ ನಿಲ್ದಾಣದ ಎರಡೂ ರನ್‍ವೇಗಳಲ್ಲಿಯೂ ಭಾರತದಲ್ಲಿಯೇ ತಯಾರಾದ ಇಂಥಆರು ಸಾಧನಗಳನ್ನು ಹೊಂದಿದಂತಾಗಿದೆ.

ಏನಿದು ಟ್ರ್ಯಾನ್ಸ್‌ಮಿಸ್ಸೊ ಮೀಟರ್?

ಎನ್‌ಎಎಲ್ ಸ್ಥಳೀಯವಾಗಿ ತಯಾರಿಸಿದ 50ನೇ ‘ದೃಷ್ಟಿ’ ವ್ಯವಸ್ಥೆ ಇದಾಗಿದೆ. ಎನ್‌ಎಎಲ್ ಟ್ರಾನ್ಸ್‌ಮಿಸ್ಸೊ ಮೀಟರ್ ನಿಖರ ವರದಿಗೆ ಖ್ಯಾತಿ ಪಡೆದಿದೆ. ವಿಮಾನ ನಿಲ್ದಾಣದ ರನ್‍ವೇಗಳಲ್ಲಿ 25 ಮೀಟರ್‌ವರೆಗಿನ ದೂರದ ದೃಶ್ಯಗಳನ್ನು ಈ ಸಾಧನಗಳು ನಿಖರವಾಗಿ ಅಳೆಯಬಲ್ಲದು.

ವೈಮಾನಿಕ ಹವಾಮಾನ ನಿರೀಕ್ಷಣಾ ವ್ಯವಸ್ಥೆ ಮತ್ತು ರನ್‍ವೇ ವಿಸಿಬಿಲಿಟಿ ರೇಂಜ್ ಸಮಗ್ರ ದತ್ತಾಂಶಗಳು ಒಂದೇ ಡಿಸ್‍ಪ್ಲೇ ಸ್ಕ್ರೀನ್‍ನಲ್ಲಿ ಪ್ರದರ್ಶಿತವಾಗುತ್ತವೆ.ಈ ಸಾಧನಗಳು ನೀಡುವ ಸಮಗ್ರ ವರದಿ ಮತ್ತು ದತ್ತಾಂಶಗಳು ವಿಮಾನ ಚಾಲನೆ ವೇಳೆ ಪೈಲಟ್‌ಗಳಿಗೆ ನೆರವಾಗುತ್ತವೆ.

ವೆಬ್ ನೆರವಿನಿಂದ ಈ ದತ್ತಾಂಶಗಳನ್ನು ಯಾವುದೇ ಸ್ಥಳದಿಂದಾದರೂ ಪಡೆಯಬಹುದು. ಅಷ್ಟೇ ಅಲ್ಲ, ಯಾವುದೇ ಸ್ಥಳದಿಂದಲಾದರೂ ನಿರ್ವಹಣಾ ಕಾರ್ಯ ಕೈಗೊಳ್ಳಬಹುದಾಗಿದೆ. ಎ ಮತ್ತು ಬಿ ನಂತಹ ಎಲ್ಲ ವರ್ಗದ ವಿಮಾನ ನಿಲ್ದಾಣಗಳಿಗೂ ಈ ಸಾಧನಗಳು ಸೂಕ್ತವಾಗಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವದೇಶಿ ತಂತ್ರಜ್ಞಾನ ಅಳವಡಿಸಿದ ಹೆಮ್ಮೆ ನಮ್ಮದಾಗಿದೆ. ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಲ್ಲಿ ಈ ಸಾಧನಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ವಿಮಾನ ನಿಲ್ದಾಣದಲ್ಲಿ ಸೀಮಾತೀತ ಕಾರ್ಯಾಚರಣೆ ಕೈಗೊಳ್ಳಲು ಈ ತಂತ್ರಜ್ಞಾನ ಅವಕಾಶ ಮಾಡಿಕೊಡಲಿದೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರರ್ ಹೇಳುತ್ತಾರೆ.

ವೈಮಾನಿಕ ಹವಾಮಾನ ನಿರೀಕ್ಷಣಾ ವ್ಯವಸ್ಥೆ ಸೆನ್ಸರ್ ಅಳವಡಿಸಲಾದ 10 ಮೀಟರ್ ಎತ್ತರದ ಕಂಬಗಳನ್ನು ರನ್‌ವೇ ಬಳಿ ಸ್ಥಾಪಿಸಲಾಗಿದೆ. ಎನ್‌ಎಎಲ್‌ವಿನ್ಯಾಸಗೊಳಿಸಿರುವ ಈಹಗುರ ಕಂಬಗಳು ಪರಿಸರಸ್ನೇಹಿಯಾಗಿದ್ದು,ಕನಿಷ್ಠ 60 ವರ್ಷ ಬಾಳಿಕೆ ಬರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.