ಬೆಂಗಳೂರು: ‘ಕರ್ನಾಟಕ ರಾಜ್ಯೋತ್ಸವದ ಆಚರಣೆ ನಿತ್ಯೋತ್ಸವ ವಾಗಬೇಕು. ಕನ್ನಡಿಗರು ತಮ್ಮ ಭಾಷೆಗೆ ಸಮರ್ಪಿಸಿಕೊಳ್ಳುವ ಕೆಲಸವನ್ನು ನಿತ್ಯವೂ ಮಾಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಶನಿವಾರ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಮತ್ತು ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ ಹಲವು ಹಿರಿಯರ ಮಾತೃಭಾಷೆ ಕನ್ನಡವಾಗಿರಲಿಲ್ಲ. ಅಷ್ಟೇ ಅಲ್ಲ, ವಿದೇಶದಿಂದ ಬಂದ ಮೊಗ್ಲಿಂಗ್, ಕಿಟಲ್, ಕಬ್ಬನ್ ಮೊದಲಾದವರು ಕನ್ನಡ ನಾಡಿಗೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮಗೆ ಪ್ರೇರಣೆ ಆಗಬೇಕು’ ಎಂದರು. ‘ಸಾಹಿತ್ಯ ಪರಿಷತ್ತಿ ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳು ಸ್ಥಾಪಿತವಾಗಿವೆ. ಯಾವುದೇ ಅರ್ಜಿ-ಮರ್ಜಿ ಇಲ್ಲದೆ ಪಾರದರ್ಶಕವಾಗಿ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ನಿಜವಾದ ಸಾಧಕರನ್ನು
ಗುರುತಿಸ ಲಾಗುತ್ತದೆ’ ಎಂದರು.

ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಶ್ರೀಧರರಾವ್ ಅವರು ‘ಸಾಹಿತ್ಯ ಪರಿಷತ್ತಿನ ದತ್ತಿಗಳು ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟಗಳಲ್ಲಿಯೂ
ಸಾಧಕರನ್ನು ಗುರುತಿಸಿ ಮಹತ್ವದ ಪರಂಪರೆಯನ್ನು ರೂಪಿಸಿದೆ’ ಎಂದು ಪ್ರಶಂಸಿಸಿದರು.

ದತ್ತಿ ಪ್ರಶಸ್ತಿ ಪ್ರದಾನ: ‘ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿ’ಯನ್ನು ಕಾಸರಗೋಡಿನ ವಿದ್ವಾಂಸ ಪ್ರೊ.ಪಿ.ಕೃಷ್ಣ ಭಟ್ ಅವರಿಗೆ, ಶೈಲಜಾ ಟಿ. ಎಸ್ ಅವರು ಸ್ಥಾಪಿಸಿರುವ ‘ಶ್ರೀಮತಿ ಟಿ.ಗಿರಿಜಾ ದತ್ತಿ ಪ್ರಶಸ್ತಿ’ಯನ್ನು ಭಾಷಾತಜ್ಞೆ ವನಮಾಲಾ ವಿಶ್ವನಾಥ್ ಅವರಿಗೆ ಪ್ರದಾನ ಮಾಡಲಾಯಿತು.

‘ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ’ ದತ್ತಿ ಪ್ರಶಸ್ತಿ ಯನ್ನು ಧಾರವಾಡದ ರಂಗಕರ್ಮಿ ಬಸವರಾಜ ಚನ್ನವೀರಪ್ಪ ಬೆಂಗೇರಿ ಅವರಿಗೆ ಮತ್ತು ‘ಎ.ಆರ್.ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದವಟ್ಟಿನ ಪ್ರಶಸ್ತಿಯನ್ನು ರಾಜ್ಯಸಭಾ ಮಾಜಿ ಸದಸ್ಯ
ಎಚ್.ಹನುಮಂತಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.