ಬೆಂಗಳೂರು: ಚಿಕ್ಕಪೇಟೆ ಹಾಗೂ ಬಸವನಗುಡಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್’ ರೂಪಿಸಲು ಬಿಬಿಎಂಪಿ ನಿರ್ಧರಿಸಿದೆ.

ಲಾಲ್‌ಬಾಗ್ ಗೋಪುರ ಹಾಗೂ ಕೆಂಪಾಂಬುಧಿ ಕೆರೆ ಗೋಪುರಗಳ ನಡುವಿನ 12 ಕಿ.ಮೀ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ, ಇದನ್ನು ಶೀಘ್ರ ಅಂತಿಮಗೊಳಿಸಲು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಂ ರಾಯ್‌ಪುರ ಅವರ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಕಾರಿಡಾರ್ ವ್ಯಾಪ್ತಿಯ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿದೀಪದ ಕಂಬಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳನ್ನು ಏಕರೂಪದಲ್ಲಿರಿಸಲು ನಿರ್ಧರಿಸಲಾಗಿದೆ. ಈಗಿರುವ ರಸ್ತೆ, ಪಾದಚಾರಿ ಮಾರ್ಗವನ್ನು ಹಾಳುಮಾಡದೆ, 1.5 ಎಂಎಂ ಪಾಲಿಥೀನ್ ಬಣ್ಣ ಬಳಿದು ಕಾರಿಡಾರ್ ಗುರುತಿಸಲಾಗುತ್ತದೆ.

ಕಾರಿಡಾರ್‌ನ ಸುಮಾರು 500 ಮೀಟರ್‌ಗೆ ಒಂದರಂತೆ 24 ಸ್ಥಳಗಳಲ್ಲಿ ಮುಕ್ತ ತಂಗುದಾಣ, ಬೀದಿದೀಪ, ಪೀಠೋಪಕರಣ, ಸೂಚನಾಫಲಕ, ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತದೆ. ಸ್ಥಳ ಪರಿಚಯದ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

24 ವಿಶೇಷ ತಂಗುದಾಣ ಹಾಗೂ ಕಾರಿಡಾರ್‌ನ ಮುಖ್ಯ ಪಾರಂಪರಿಕ ತಾಣಗಳಲ್ಲಿ ವಿಶೇಷ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಬೆಳಕು– ಧ್ವನಿ ಸಹಿತವಾದ ‘ರೂಪಕ’ ಹಾಗೂ ಧ್ವನಿ–ಬೆಳಕಿನ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಪಾರಂಪರಿಕ ಶೈಲಿಯಲ್ಲೇ ಇದನ್ನು ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ.

ಕಾರಿಡಾರ್ ವ್ಯಾಪ್ತಿಯಲ್ಲಿ ಕೃತಕ ಬುದ್ಧಿಮತ್ತೆಯ ಸೆಲ್‌ಫೋನ್ ಹಾಗೂ ಆ್ಯಪ್ ಆಧಾರಿತ ಗೈಡ್ ಸೃಷ್ಟಿಸಲಾಗುತ್ತದೆ. ಈ ಬಗ್ಗೆ ಶೀಘ್ರ ಅಂತಿಮ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸೂಚಿಸಲಾಗಿದ್ದು, ಅದಕ್ಕೂ ಮುನ್ನ ತಜ್ಞರು, ಸ್ಥಳೀಯ ನಾಗರಿಕರ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ಜಯರಾಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.