ಬೆಂಗಳೂರು: ನಗರದಲ್ಲಿರುವ ಈಜು ಕೊಳಗಳಲ್ಲಿ ಸುರಕ್ಷತೆಗೆ ಅನುಸರಿಸಬೇಕಾದ ಮಾನದಂಡಗಳಿಲ್ಲ. ಬಿಬಿಎಂಪಿ, ಅಗ್ನಿಶಾಮಕ ದಳ ಕೂಡ ಈಜು ಕೊಳಗಳಲ್ಲಿ ಅಳವಡಿಸಿಕೊಳ್ಳಬೇಕಾದ ರಕ್ಷಣಾ ವ್ಯವಸ್ಥೆಯ ಮಾರ್ಗಸೂಚಿಗಳನ್ನು ಹೊಂದಿಲ್ಲ.

ಈಜು ಎಲ್ಲರೂ ಕಲಿಯಲು ಬಯಸುವ ಕ್ರೀಡೆ. ಮಕ್ಕಳಿಗಂತೂ ಈಜು ಕೊಳವೆಂದರೆ ಅಚ್ಚುಮೆಚ್ಚು. ಈಜು ಬಾರದವರೂ ಈಜು ಕೊಳದಲ್ಲಿ ಸಮಯ ಕಳೆಯಲು, ಮೋಜು ಮಾಡಲು ಬಯಸುತ್ತಾರೆ. ಆಳ ಹೆಚ್ಚಾದಂತೆ ಈಜು ಕೊಳ ಮೋಜಿನ ಬದಲು ಆತಂಕಕ್ಕೆ ಕಾರಣವಾಗುತ್ತದೆ. ಸುರಕ್ಷತೆಯಿಂದಿದ್ದರೆ ಮಾತ್ರ ಸಂತಸ ತರುವ ಈಜು ಕೊಳಗಳಲ್ಲಿ, ಯಾವ ರೀತಿಯ ರಕ್ಷಣಾಕ್ರಮಗಳು ಇರಬೇಕು ಎಂಬುದನ್ನು ಸರ್ಕಾರಿ ಸಂಸ್ಥೆಗಳು ಸೂಚಿಸಿಲ್ಲ.

ನಗರದಲ್ಲಿ ಬಿಬಿಎಂಪಿಯ 16 ಈಜು ಕೊಳಗಳಿವೆ. ಐಷಾರಾಮಿ ಹೋಟೆಲ್, ಕ್ಲಬ್, ಶಾಪಿಂಗ್ ಮಾಲ್, ಅಪಾರ್ಟ್ಮೆಂಟ್ಗಳಲ್ಲಿರುವ ಈಜು ಕೊಳಗಳ ಸಂಖ್ಯೆ ಕೆಲವು ಸಾವಿರಗಳನ್ನೂ ಮೀರುತ್ತದೆ. ಇಷ್ಟೊಂದು ಸಂಖ್ಯೆಯಲ್ಲಿರುವ ಈಜು ಕೊಳಗಳು ಅತ್ಯಾಕರ್ಷಕವಾಗಿ ನಿರ್ಮಾಣವಾಗಿದ್ದರೂ, ಅವುಗಳಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಯಾರಲ್ಲೂ ಉತ್ತರವೇ ಇಲ್ಲ. ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ? ಯಾವ ಮಾನದಂಡಗಳಿವೆ ಎಂಬ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ.

ಹೋಟೆಲ್, ರೆಸ್ಟೋರೆಂಟ್, ಬಾರ್–ಪಬ್, ಪೇಯಿಂಗ್ ಗೆಸ್ಟ್ (ಪಿಜಿ) ನಿರ್ಮಾಣ ಹಾಗೂ ನಿರ್ವಹಣೆಗಾಗಿ ಸಾಕಷ್ಟು ಮಾರ್ಗಸೂಚಿಗಳನ್ನು ಹೊಂದಿರುವ ಬಿಬಿಎಂಪಿ, ಈಜುಕೊಳಗಳಲ್ಲಿನ ಸುರಕ್ಷತೆಗೆ ಕೈಗೊಳ್ಳಬೇಕಾದ ಪ್ರತ್ಯೇಕ ಕ್ರಮಗಳ ಮಾರ್ಗಸೂಚಿಯನ್ನು ಹೊಂದಿಲ್ಲ.

‘ಈಜುಕೊಳದಲ್ಲಿ ನೀರಿನ ಮಟ್ಟವನ್ನು ಕೊಳದ ಎರಡೂ ಬದಿಯಲ್ಲಿ ನಮೂದಿಸಬೇಕು, ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಟ್ಯೂಬ್ ವ್ಯವಸ್ಥೆ ಇರಬೇಕು, ಸದಾ ಮೇಲ್ವಿಚಾರಕರು ಇರಬೇಕು’ ಎಂಬ ಸಾಮಾನ್ಯ ಮಾನದಂಡಗಳು ಇವೆ. ಆದರೆ, ಇದೆಲ್ಲ ಇರಲೇಬೇಕು ಎಂಬ ಕಟ್ಟಪ್ಪಣೆಯ ಸೂಚನೆಗಳನ್ನು ಯಾವ ಸಂಸ್ಥೆಯೂ ನೀಡಿಲ್ಲ.

ಐಷಾರಾಮಿ ಹೋಟೆಲ್, ಕ್ಲಬ್ ಹಾಗೂ ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಈಜು ಕಲಿಸುವ ತರಬೇತುದಾರರು ಇರುತ್ತಾರೆ. ಅದರ ನಿರ್ವಹಣೆಗೆಂದೇ ಸಿಬ್ಬಂದಿ ಸದಾ ಇರುತ್ತಾರೆ. ಆದರೆ, ಇದು ಎಲ್ಲ ಈಜುಕೊಳಗಳಿಗೂ ಅನ್ವಯಿಸುವುದಿಲ್ಲ. ಬಹುತೇಕ ಈಜುಕೊಳಗಳಲ್ಲಿ ಮೇಲ್ವಿಚಾರಕರೇ ಇರುವುದಿಲ್ಲ. ಅಪಾಯದ ಸಂದರ್ಭದಲ್ಲಿ ಸಹಾಯಹಸ್ತ ಚಾಚುವವರು ಸಮೀಪದಲ್ಲಿ ಇರುವುದಿಲ್ಲ.

2023ರಲ್ಲಿ ನಗರದ ಹೊರ ವಲಯದಲ್ಲಿ ಈಜು ಕೊಳದಲ್ಲಿ ವಿದ್ಯುತ್ ಆಘಾತದಿಂದ ಬಾಲಕನೊಬ್ಬ ಮೃತಪಟ್ಟಿದ್ದ. ಆ ಸಂದರ್ಭದಲ್ಲಿ ಈಜು ಕೊಳದ ಸುರಕ್ಷತೆ ಬಗ್ಗೆ ಚರ್ಚೆ ಆರಂಭವಾಗಿತ್ತು. ಆದರೆ, ಸುರಕ್ಷತಾ ಕ್ರಮಗಳ ಕುರಿತು ಯಾವುದೇ ನಿರ್ಧಾರಗಳು ಆಗಿಲ್ಲ.

‘ಈಜು ಕೊಳಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಗೆ ಮಾನದಂಡಗಳಿವೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರಾಕರಿಸಿದರು.

ಬಿಬಿಎಂಪಿ ಈಜುಕೊಳ ಖಾಸಗಿ ನಿರ್ವಹಣೆ

‘ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಈಜು ಕೊಳಗಳಿವೆ. ಅವುಗಳ ನಿರ್ವಹಣೆಯನ್ನು ವಲಯ ಕಚೇರಿಗಳಿಗೆ ನೀಡಲಾಗಿದೆ. ಆದರೆ ಅವುಗಳನ್ನು ಪಾಲಿಕೆ ವತಿಯಿಂದ ನಿರ್ವಹಿಸಲಾಗುತ್ತಿಲ್ಲ. ಖಾಸಗಿಯವರಿಗೆ ಅಥವಾ ಸಂಘ–ಸಂಸ್ಥೆಗಳಿಗೆ ಒಪ್ಪಂದದ ಮೇರೆಗೆ ನೀಡಲಾಗಿದೆ. ಅಗತ್ಯ ಸುರಕ್ಷತೆ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ಆದರೆ ಯಾವ ಕ್ರಮಗಳು ಎಂಬುದನ್ನು ನಮೂದಿಸಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ‘ಪಾಲಿಕೆಯಲ್ಲಿರುವ ಈಜು ಕೊಳಗಳ ಸಮಗ್ರ ಮಾಹಿತಿ ಮುಖ್ಯ ಆಯುಕ್ತರು ಅಥವಾ ಪ್ರಧಾನ ಎಂಜಿನಿಯರ್ ಕಚೇರಿಯಲ್ಲೇ ಇಲ್ಲ. ವಲಯಗಳಿಗೆ ನೀಡಲಾಗಿದ್ದು ಅವರಿಂದಲೇ ಮಾಹಿತಿ ಪಡೆದುಕೊಳ್ಳಬೇಕು. ಸುರಕ್ಷತೆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಿಲ್ಲ’ ಎಂದು ಉತ್ತರಿಸಿದರು.

‘ಕಟ್ಟಡ ನಕ್ಷೆಯಲ್ಲಿ ನಮೂದು’

‘ನಗರದಲ್ಲಿರುವ ಅಪಾರ್ಟ್ಮೆಂಟ್ಗಳು ಕಟ್ಟಡ ನಕ್ಷೆ ಪಡೆಯುವಾಗ ಈಜು ಕೊಳ ಎಂದು ಜಾಗ ಗುರುತಿಸಿ ಅನುಮತಿ ಪಡೆದಿರುತ್ತಾರೆ. ಆನಂತರ ಎಲ್ಲ ಕಡೆಯಲ್ಲೂ ಅದು ಈಜು ಕೊಳವಾಗಿಯೇ ನಿರ್ಮಾಣವಾಗಿರುವುದಿಲ್ಲ. ಬೇರೆ ಅಗತ್ಯಗಳಿಗೆ ಉಪಯೋಗಿಸಿಕೊಂಡಿರುತ್ತಾರೆ. ಅದರ ಬಗ್ಗೆ ಹೆಚ್ಚು ಒತ್ತು ನೀಡುವುದಿಲ್ಲ’ ಎಂದು ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ತಿಳಿಸಿದರು. ‘ಈಜು ಕೊಳ ಸೇರಿದಂತೆ ಯಾವುದೇ ರೀತಿಯ ನಿರ್ಮಾಣ ಮಾಡುವುದಿದ್ದರೆ ಅದಕ್ಕೆ ನಕ್ಷೆ ಅನುಮೋದನೆ ಆಗಲೇಬೇಕು. ನಕ್ಷೆಯಲ್ಲಿ ಇಲ್ಲದಿದ್ದರೆ ನಿರ್ಮಾಣಕ್ಕೆ ಮುಂಚೆ ನಕ್ಷೆ ಅನುಮೋದನೆ ಮಾಡಿಸಿಕೊಳ್ಳಲೇಬೇಕು. ಆದರೆ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಸಂಬಂಧಿಸಿದಂತೆ ನಮ್ಮ ಷರತ್ತುಗಳಿರುವುದಿಲ್ಲ’ ಎಂದು ಮಾಹಿತಿ ನೀಡಿದರು. ‘ಕಟ್ಟಡಗಳಲ್ಲಿ ಅಗ್ನಿ ದುರಂತವಾದಾಗ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ಮಾತ್ರ ನಾವು ನೋಡುತ್ತೇವೆ. ಈಜು ಕೊಳದ ಸುರಕ್ಷತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದರು.

‘ರೋಗನಿಯಂತ್ರಣಕ್ಕೆ ಸೂಚನೆ ಇದೆ’

‘ಈಜು ಕೊಳದ ನೀರಿನಿಂದ ಉಂಟಾಗಬಹುದಾದ ಹರಡಬಹುದಾದ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ವಿಭಾಗದಿಂದ ಸೂಚನೆ ನೀಡಬಹುದು. ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಈಜು ಕೊಳದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಭದ್ರತೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವ ನಿಯಮಗಳಿವೆ ಎಂಬುದನ್ನು ಪರಿಶೀಲಿಸಬೇಕು’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

‘ಕಠಿಣ ಕ್ರಮಗಳಿರಲಿ’

‘ಈಜುಕೊಳಗಳಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಈಜುಕೊಳ ನಿರ್ಮಾಣ ಮಾಡುವಾಗ ತೋರುವ ಮುತುವರ್ಜಿಯನ್ನು ಅದರ ನಿರ್ವಹಣೆಗೂ ನೀಡಬೇಕು. ನೀರು ಎಂತಹ ಅಪಾಯವನ್ನಾದರೂ ತಂದೊಡ್ಡಬಹುದು. ಇದಕ್ಕಾಗಿ ರಕ್ಷಣಾ ಕ್ರಮಗಳು ಕಠಿಣವಾಗಿರಬೇಕು. ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಸರ್ಕಾರಿ ಸಂಸ್ಥೆಗಳು ನಿಗಾವಹಿಸಬೇಕು’ ಎಂದು ವಿಜಯನಗರದ ನಿವಾಸಿ ಚಂದ್ರಪ್ಪ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.