ಬೆಂಗಳೂರು: ಪರಪ್ಪನ ಕೇಂದ್ರ ಕಾರಾಗೃಹದಲ್ಲಿರುವ ರೌಡಿಶೀಟರ್ ಧರ್ಮ ಎಂಬಾತನಿಗೆ ಬಾಣಸವಾಡಿಯಲ್ಲಿ ಟೂರ್ಸ್ ಅಂಡ್ ಟ್ರಾವೆಲ್ಸ್ ಉದ್ಯಮ ನಡೆಸುತ್ತಿರುವ ಮಣಿವಣ್ಣನ್ ಎಂಬಾತ ಮೊಬೈಲ್ ಮತ್ತು ಸಿಮ್ ಕಾರ್ಡ್ ಪೂರೈಕೆ ಮಾಡಿದ್ದ ಎಂಬುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ದರ್ಶನ್ ಇದ್ದ ಬ್ಯಾರಕ್ಗೆ ತೆರಳಿದ ರೌಡಿಶೀಟರ್ ಪುತ್ರ ಧರ್ಮ, ತನ್ನ ಮೊಬೈಲ್ನಿಂದ ಬ್ಯಾಡರಹಳ್ಳಿ ರೌಡಿಶೀಟರ್ ಸತ್ಯನಿಗೆ ವಿಡಿಯೊ ಕರೆ ಮಾಡಿದ್ದ. ಆಗ ದರ್ಶನ್ ಸಹ ಸೌಜನ್ಯದಿಂದ ವಿಡಿಯೊ ಕರೆಗೆ ಪ್ರತಿಕ್ರಿಯಿಸಿದ್ದರು. ಧರ್ಮನ ಆಪ್ತ, ಬಾಣಸವಾಡಿಯ ಮಣಿವಣ್ಣನ್ ಸಿಮ್ ನೀಡಿದ್ದು ಎಂಬ ಮಾಹಿತಿ, ಸಾಕ್ಷ್ಯಾಧಾರ ತನಿಖಾ ತಂಡಕ್ಕೆ ಲಭ್ಯವಾಗಿವೆ.

‘ಮೆಜೆಸ್ಟಿಕ್ ಬಳಿಯ ಮೊಬೈಲ್ ಅಂಗಡಿಯಿಂದ ಧರ್ಮನಿಗಾಗಿ ಒನ್ ಪ್ಲಸ್ ಸೆಕೆಂಡ್ ಹ್ಯಾಂಡ್ ಮೊಬೈಲ್ ಅನ್ನು ಮಣಿವಣ್ಣನ್ ಖರೀದಿ ಮಾಡಿದ್ದ. ಖರೀದಿಗೂ ಮುನ್ನ ಮೊಬೈಲ್ ಫೋಟೊ ಕಳುಹಿಸಿ ಯಾವುದು ಬೇಕು ಎಂದು ಕೇಳಿದ್ದ. ಈ ಸಂಬಂಧ ಅಂಗಡಿ ಮಾಲೀಕನ ವಿಚಾರಣೆ ಸಹ ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಣಿವಣ್ಣನ್ ತನ್ನ ಕಾರಿನ ಚಾಲಕ ಯಾದವ್ ಹೆಸರಲ್ಲಿ ಖರೀದಿ ಮಾಡಿದ್ದ ಸಿಮ್ ಅನ್ನು ಬಟ್ಟೆಯಲ್ಲಿ ಅಡಗಿಸಿ ಜೈಲು ಸಿಬ್ಬಂದಿ ಮೂಲಕ ಮೊಬೈಲ್ ಜತೆ ಕಳುಹಿಸಿದ್ದ. ವಿಡಿಯೊ ಕರೆ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಧರ್ಮ ಮೊಬೈಲ್ ಮತ್ತು ಸಿಮ್ ಅನ್ನು ಜಜ್ಜಿ ಶೌಚಾಲಯದಲ್ಲಿ ಹಾಕಿ ನೀರು ಸುರಿದಿದ್ದ’ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಜೈಲು ಅಕ್ರಮಗಳಿಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಪೊಲೀಸರು ಪ್ರಾಥಮಿಕ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದು, ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.