ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಕಲಿ ಬಂದೂಕು ಹಿಡಿದು ಭಯ ಸೃಷ್ಟಿಸುತ್ತಿದ್ದ ‘ರೀಲ್ಸ್‌ ಸ್ಟಾರ್‌’ ಬಂಧನ

Published 1 ಜುಲೈ 2024, 15:56 IST
Last Updated 1 ಜುಲೈ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ಎಕೆ –47 ಮಾದರಿ ನಕಲಿ ಬಂದೂಕು ಹಿಡಿದು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಜೆ.ಪಿ.ನಗರದ ನಿವಾಸಿ ಅರುಣ್‌ ಕಠಾರೆ (26) ಬಂಧಿತ ಆರೋಪಿ. ಈತ  ‘ರೀಲ್ಸ್‌ ಸ್ಟಾರ್’ ಎಂದು ಕರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.  

ರೀಲ್ಸ್‌ಗಾಗಿ ನಾಲ್ಕು ಗನ್‌ಮ್ಯಾನ್‌ಗಳಿಗೆ ಎಕೆ 47 ಮಾದರಿಯ ನಕಲಿ ಬಂದೂಕು ನೀಡಿ ಜನರಲ್ಲಿ ಭಯ ಸೃಷ್ಟಿಸುತ್ತಿದ್ದ. ಆರೋಪಿ ಜೂನ್‌ 9ರಂದು ಬಾಡಿಗಾರ್ಡ್‌ಗಳ ಜತೆ ಚೊಕ್ಕನಹಳ್ಳಿಯ ಭಾರತೀಯ ಸಿಟಿಯ ಲೀಲಾ ಹೋಟೆಲ್ ಬಳಿ ಬಂದಿದ್ದು, ಕೆಲವರಿಗೆ ಹೆದರಿಸಿದ್ದ. ಸಾರ್ವಜನಿಕರು ಆತಂಕಗೊಂಡು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಚಿತ್ರದುರ್ಗದ ಅರುಣ್ ಕಠಾರೆ ಇಲ್ಲಿನ ಜೆ.ಪಿ. ನಗರದಲ್ಲಿ ನೆಲೆಸಿದ್ದಾನೆ. ಮೈ ತುಂಬಾ ನಕಲಿ ಚಿನ್ನಾಭರಣ ತೊಟ್ಟು, ನಕಲಿ ಬಂದೂಕು ಹಿಡಿದು ಅಂಗರಕ್ಷಕರು, ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳ ಜೊತೆಗೆ ವಿಲಾಸಿ ಜೀವನ ಪ್ರದರ್ಶಿಸಿ ರೀಲ್ಸ್ ಮಾಡುವ ಅಭ್ಯಾಸ ಹೊಂದಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT