ರಾಜರಾಜೇಶ್ವರಿನಗರ: ’ತಮ್ಮ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾವಹಿಸಿದರೆ, ಗುಣಮಟ್ಟದ ಕೆಲಸಗಳಾಗುತ್ತವೆ, ದೀರ್ಘಕಾಲ ಬಾಳಿಕೆ ಬರುತ್ತವೆ‘ ಎಂದು ಶಾಸಕ ಎಸ್. ಟಿ. ಸೋಮಶೇಖರ್ ಹೇಳಿದರು.

ರಾಮಸಂದ್ರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ ರಾಜಕೀಯ ಅಥವಾ ಪಕ್ಷ ಮುಖ್ಯವಲ್ಲ. ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದ ಅವರು, ಗ್ರಾಮಸ್ಥರು ಸರ್ಕಾರದ ಸವಲತ್ತುಗಳನ್ನು ಜನರು ಸದುಪಯೋಗ ಪಡೆದುಕೊಂಡು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಹೊಂದಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ, ರಾಮಸಂದ್ರದ ಗ್ರಾಮ ಪಂಚಾಯ್ತಿಯ ಮೊದಲ ಅಂತಸ್ತಿನ ಕಟ್ಟಡ, ಬಂಗಲೆ ಗ್ರಾಮದ ಬಳಿಯ ಸೇತುವೆ ಕಾಮಗಾರಿಗೆ ಚಲನೆ ನೀಡಿದರು. ಕೆಂಚನಪುರ ಅಂಗನವಾಡಿ ಕೇಂದ್ರ ಮತ್ತು ಧ್ವಜಸ್ಥಂಭ, ಹೈಮಾಸ್ಟ್ ದೀಪ, ಸೂಲಿಕೆರೆಯಲ್ಲಿ ಪ್ರಯಾಣಿಕರ ತಂಗುದಾಣ ಮತ್ತು ಸಮುದಾಯ ಭವನ ಲೋಕಾರ್ಪಣೆ ಮಾಡಿದರು. ಬಸವೇಶ್ವರ ನಗರದಲ್ಲಿ ಅಂಗನವಾಡಿ ಕಟ್ಟಡ, ಕೊಮ್ಮಘಟ್ಟದಲ್ಲಿ ಗ್ರಂಥಾಲಯ, ಸರ್ಕಾರಿ ಶಾಲಾ ಕಟ್ಟಡ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.