ಬೆಂಗಳೂರು: ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಗೆ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜತೆಗೆ ಖಾಸಗಿ ಕ್ಷಣಗಳನ್ನು ಕಳೆದು ವಂಚಿಸಿದ್ದ ಕೇರಳದ ಖಾಸಗಿ ಕಂಪನಿಗೆ ಸೇರಿದ ಹಡಗಿನ ಸಿಬ್ಬಂದಿಯೊಬ್ಬರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಬಿಲಾಲ್ ರಫೀಕ್(30) ಬಂಧಿತ.

‘ಛತ್ತೀಸಗಡದ ಯುವತಿಗೆ ಮದುವೆ ಆಗುವುದಾಗಿ ವಂಚಿಸಿ, ಜಾತಿನಿಂದನೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತೆಯು, ಬಿಲಾಲ್ ರಫೀಕ್ ಹಾಗೂ ಅವರ ತಂದೆ ಮೊಹ್ಮದ್ ರಫೀಕ್, ತಾಯಿ ಮುತ್ತಬಿ ರಫೀಕ್, ಸಹೋದರಿ ಅತೀನಾ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಕೆಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ ಸಂತ್ರಸ್ತೆ, ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಾಸರಹಳ್ಳಿಯ ಬಡಾವಣೆಯೊಂದರಲ್ಲಿ ವಾಸವಾಗಿದ್ದರು. 2021ರಲ್ಲಿ ಇನ್ಸ್ಟ್ರಾಗ್ರಾಂನಲ್ಲಿ ಕೇರಳದ ಬಿಲಾಲ್ ರಫೀಕ್ ಪರಿಚಯ ಆಗಿದ್ದರು. ಬಳಿಕ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಕರೆ ಮತ್ತು ವಾಟ್ಸ್ಆ್ಯಪ್ ಚಾಟಿಂಗ್ ಮಾಡುತ್ತಿದ್ದರು. ನಂತರ ಇಬ್ಬರೂ ಪ್ರೀತಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘2022ರ ಮೇ ತಿಂಗಳಲ್ಲಿ ಆರೋಪಿ ಬೆಂಗಳೂರಿಗೆ ಬಂದು, ಸಹಕಾರನಗರದ ವಸತಿ ಗೃಹವೊಂದಕ್ಕೆ ಕರೆದೊಯ್ದು, ಮದುವೆ ಆಗುತ್ತೇನೆ ಎಂದು ನಂಬಿಸಿ, ಆಕೆಯ ಜತೆಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು’ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

‘ಸಂತ್ರಸ್ತೆಯ ಸ್ವಂತ ಊರಿಗೂ ಆರೋಪಿ ತೆರಳಿ ಕುಟುಂಬ ಸದಸ್ಯರಿಗೆ ಮದುವೆಗೆ ಒಪ್ಪಿಸಿದ್ದರು. ಈತನ ಕುಟುಂಬ ಸದಸ್ಯರು ಕೂಡ ಮದುವೆಗೆ ಒಪ್ಪಿದ್ದರು. ಆರೋಪಿಗೆ ಸಂತ್ರಸ್ತೆ, ನಗದು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು. ನಂತರ, ಆರೋಪಿ ಮನೆಯವರು ಕರೆ ಮಾಡಿ ಜಾತಿ ನಿಂದನೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.