ಬೆಂಗಳೂರು: ನೈರುತ್ಯ ರೈಲ್ವೆ ಆದಾಯವು ಕಳೆದ 10 ತಿಂಗಳಲ್ಲಿ ಶೇ 11.09ರಷ್ಟು ಹೆಚ್ಚಳವಾಗಿದೆ. ಇದು ದಾಖಲೆಯ ಬೆಳವಣಿಗೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ತಿಳಿಸಿದ್ದಾರೆ.

2023ರ ಏಪ್ರಿಲ್ನಿಂದ 2024ರ ಫೆಬ್ರುವರಿ ಅಂತ್ಯದವರೆಗೆ ₹ 6,970.18 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕಿಂತ ₹ 696.02 ಕೋಟಿ ಅಧಿಕವಾಗಿದೆ. ಈ ಬಾರಿ 11 ತಿಂಗಳಲ್ಲಿ ಪ್ರಯಾಣಿಕರಿಂದ ₹2,837.87 ಕೋಟಿ ಆದಾಯ ಬಂದಿದ್ದು, ಹಿಂದಿನ ಬಾರಿಗಿಂತ ₹ 323.43 ಕೋಟಿ (ಶೇ 12.86) ಹೆಚ್ಚಳವಾಗಿದೆ.

ಸರಕು ಸಾಗಣೆಯಲ್ಲಿ ಆದಾಯ ₹ 4,590.52 ಕೋಟಿ ತಲುಪಿದೆ. ಕಳೆದ ಬಾರಿಗಿಂತ ₹ 422.64 ಕೋಟಿ (ಶೇ 10.13) ಹೆಚ್ಚಳವಾಗಿದೆ. ಬಂಡವಾಳ ವೆಚ್ಚ (ಕ್ಯಾಪೆಕ್ಸ್) ₹ 6,462.40 ಕೋಟಿ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ₹ 2,386.75 ಕೋಟಿ (ಶೇ 58.56)ಯಷ್ಟಾಗಿದ್ದು, ಗಮನಾರ್ಹ ಹೆಚ್ಚಳ ಕಂಡಿದೆ ಎಂದು ಅರವಿಂದ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.