ಬೆಂಗಳೂರು: ಸಹೋದ್ಯೋಗಿ ಯುವತಿ ಜೊತೆ ಸಲುಗೆ ಇಟ್ಟುಕೊಂಡು ಖಾಸಗಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಅಮೀರ್ ಹುಸೇನ್ ಫೈಸಲ್‌ನನ್ನು (26) ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಯುವತಿ, ಬ್ಲ್ಯಾಕ್‌ಮೇಲ್ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಫೈಸಲ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಸ್ಸಾಂನ ಫೈಸಲ್ ಹಾಗೂ ಯುವತಿ, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಅವರಿಬ್ಬರಿಗೆ ಪರಿಚಯವಾಗಿತ್ತು. ಸಲುಗೆಯೂ ಇತ್ತು. ಇಬ್ಬರೂ ಹಲವು ಕಡೆ ಸುತ್ತಾಡಿದ್ದರು. ಇದೇ ಸಂದರ್ಭದಲ್ಲಿ ಯುವತಿಯ ಖಾಸಗಿ ವಿಡಿಯೊಗಳನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

ದೂರವಾಗಿದ್ದ ಯುವತಿ: ‘ಆರೋಪಿ ಹಾಗೂ ಯುವತಿ, ಹಲವು ಬಾರಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಯುವತಿಗೆ ಆರೋಪಿ ಕಿರುಕುಳ ನೀಡಲಾರಂಭಿಸಿದ್ದ. ಅನುಮಾನಪಟ್ಟು ಬೈಯುತ್ತಿದ್ದ. ಬೇಸತ್ತ ಯುವತಿ, ಆರೋಪಿಯಿಂದ ದೂರವಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಂಪನಿ ಕೆಲಸ ಬಿಟ್ಟಿದ್ದ ಆರೋಪಿ, ಅಸ್ಸಾಂಗೆ ಹೋಗಿದ್ದ. ಇದಾದ ನಂತರವೂ ಯುವತಿಗೆ ಆಗಾಗ ಕರೆ ಮಾಡಲಾರಂಭಿಸಿದ್ದ. ಭೇಟಿಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಆದರೆ, ಯುವತಿ ಅದಕ್ಕೆ ಒಪ್ಪಿರಲಿಲ್ಲ’ ಎಂದು ತಿಳಿಸಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ಸೃಷ್ಟಿ: ‘ಯುವತಿ ಜೊತೆ ಸಲುಗೆ ಮುಂದುವರಿಸಲು ಯೋಚಿಸುತ್ತಿದ್ದ ಆರೋಪಿ, ಪದೇ ಪದೇ ಕರೆ ಮಾಡಲಾರಂಭಿಸಿದ್ದ. ಆದರೆ, ಯುವತಿ ಕರೆ ಸ್ವೀಕರಿಸಿರಲಿಲ್ಲ. ಯುವತಿ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಮೂರು ಖಾಸಗಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದ. ಅದರ ಲಿಂಕ್‌ನ್ನು ಯುವತಿಗೆ ಕಳುಹಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಫೋಟೊ ನೋಡಿ ಹೆದರಿದ್ದ ಯುವತಿ, ಆರೋಪಿಗೆ ಕರೆ ಮಾಡಿದ್ದರು. ‘ನಾನು ಕರೆದ ಕಡೆ ಬರಬೇಕು. ಇಲ್ಲದಿದ್ದರೆ, ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದು ಬೆದರಿಸಿದ್ದ. ಮತ್ತಷ್ಟು ಗಾಬರಿಗೊಂಡಿದ್ದ ಯುವತಿ, ಠಾಣೆಗ ದೂರು ನೀಡಿದ್ದರು. ಇದರ ನಡುವೆಯೇ ಆರೋಪಿ, ಅಸ್ಸಾಂನಿಂದ ಚೆನ್ನೈಗೆ ಬಂದಿದ್ದ. ಚೆನ್ನೈಗೆ ಬರುವಂತೆ ಯುವತಿಗೆ ಹೇಳಿದ್ದ’ ಎಂದು ತಿಳಿಸಿದರು.

ಸಂತ್ರಸ್ತೆ ಜೊತೆ ಕಾರ್ಯಾಚರಣೆ: ‘ಆರೋಪಿ ಬಂಧಿಸಲು ವಿಶೇಷ ತಂಡ ರಚಿಸಿ, ಸಂತ್ರಸ್ತೆ ಜೊತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೆಜೆಸ್ಟಿಕ್ ನಿಲ್ದಾಣಕ್ಕೆ ಮಹಿಳಾ ಸಿಬ್ಬಂದಿ ಸಮೇತ ಯುವತಿಯನ್ನು ಕರೆದೊಯ್ದು, ಅಲ್ಲಿಂದಲೇ ಆರೋಪಿಗೆ ವಿಡಿಯೊ ಕರೆ ಮಾಡಿಸಲಾಗಿತ್ತು. ಚೆನ್ನೈಗೆ ಬರುತ್ತಿರುವುದಾಗಿ ಹೇಳಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಯುವತಿ ಜೊತೆಗೆ ಪೊಲೀಸರು ಇರುವ ಮಾಹಿತಿ ಆರೋಪಿಗೆ ಗೊತ್ತಿರಲಿಲ್ಲ. ಚೆನ್ನೈಗೆ ಹೋಗಿದ್ದ ಯುವತಿ, ಆರೋಪಿಯನ್ನು ಭೇಟಿಯಾಗಿದ್ದರು. ಅದೇ ಸಂದರ್ಭದಲ್ಲಿ ಸಿಬ್ಬಂದಿ, ಆರೋಪಿಯನ್ನು ಸೆರೆ ಹಿಡಿದು ನಗರಕ್ಕೆ ಕರೆತಂದಿದ್ದಾರೆ’ ಎಂದು ತಿಳಿಸಿದರು.

‘ಆರೋಪಿ ಮತ್ತಷ್ಟು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಮಾಹಿತಿ ಇದ್ದು, ಪರಿಶೀಲಿಸಲಾಗುತ್ತಿದೆ. ಸದ್ಯ ಯುವತಿ ಮಾತ್ರ ದೂರು ನೀಡಿದ್ದಾರೆ’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.