ಬೆಂಗಳೂರು: ಏನೋ ಸಾಧಿಸಿದ ಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಕಲಿತ ವಿದ್ಯೆ ನೆರವಾಯಿತಲ್ಲ ಎನ್ನುವ ಸಾರ್ಥಕ ಭಾವ ಕಾರು ಚಾಲಕಿಯರ ಮೊಗದಲ್ಲಿ ಮೂಡಿತ್ತು,

‘ಆ್ಯಕ್ಷನ್ ಆ್ಯಡ್’ ಸಂಘಟನೆಯು ‘ಡಿಎಕ್ಸ್‌ಸಿ ಟೆಕ್ನಾಲಜೀಸ್' ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು.

ಕಾಟನ್‌ಪೇಟೆಯ ಕೊಳೆಗೇರಿಗಳ 15 ಮಹಿಳೆಯರಿಗೆ ಕಾರು ಚಾಲನಾ ತರಬೇತಿ ನೀಡಲಾಗಿದ್ದು, ಅವರೆಲ್ಲರಿಗೂ ಪ್ರಮಾಣ ಪತ್ರ ವಿತರಣೆಯನ್ನು ಮಾಡಲಾಯಿತು.

‘ನಾನು ಟೇಲರ್ ಕೆಲಸ ಮಾಡಿಕೊಂಡಿದ್ದವಳು. ಕಾರು ಚಾಲನೆ ನನ್ನಿಂದ ಅಸಾಧ್ಯ ಎಂದೇ ಭಾವಿಸಿದ್ದೆ. ಆದರೆ, ತರಬೇತಿಯ ನಂತರ ಯಶಸ್ವಿಯಾಗಿ ಕಾರು ನಡೆಸಲು ಕಲಿತಿದ್ದೇನೆ. ಸದ್ಯ ಗೋ ಪಿಂಕ್ ಸಂಸ್ಥೆ ಚಾಲಕಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದು ಸ್ಲಂ ಮಹಿಳಾ ಸಂಘಟನೆಯ ಸದಸ್ಯೆ ಗಾಯತ್ರಿ ಹೇಳಿದರು.

‘ಕಾರು ಚಾಲನಾತರಬೇತಿಗೆ ಒಟ್ಟು 30 ಜನ ಆಯ್ಕೆಯಾಗಿದ್ದಾರೆ. ಮೊದಲ ಬ್ಯಾಚ್‌ನಲ್ಲಿ15 ಜನರಿಗೆ ಕಾರು ಚಾಲನಾ ತರಬೇತಿ ಜತೆಗೆ
ಸ್ವಯಂ ರಕ್ಷಣಾ ತರಬೇತಿಯನ್ನೂ ನೀಡಲಾಗಿದೆ. ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ (ಡಿ.ಎಲ್) ವಿತರಣೆ ಮಾಡಲಾಗಿದೆ.

ಮುಂದಿನ ಬ್ಯಾಚ್‌ನಲ್ಲಿ ಎನ್‌ಸಿಟಿಸಿ ಪಾಳ್ಯ ಹಾಗೂ ಸ್ಪಾಟ್‌ಲೈಟ್‌ನ 15 ಮಹಿಳೆಯರಿಗೆ ತರಬೇತಿ ನೀಡಲಿದ್ದೇವೆ’ ಎಂದು ಯೋಜನೆಯ ಸಂಯೋಜಕ ನವೀನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.