ಬೆಂಗಳೂರು: ಮಹಿಳೆ ಮತ್ತು ಪುರುಷರ ಸಮಾನತೆಯತ್ತ ಸಮಾಜ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಲೈಂಗಿಕತೆ ಬಗ್ಗೆ ಮುಕ್ತವಾಗಿ ಚರ್ಚಿಸಲು ಹಿಂಜರಿಯುವುದು ಸರಿಯೇ. ಮಹಿಳೆಯರ ದಿಟ್ಟತನವನ್ನು ಕಟ್ಟಿಕೊಟ್ಟಿರುವ ಲೇಖಕಿಯರಿಗೂ ಈ ಬಗ್ಗೆ ಮಡಿವಂತಿಕೆ ಏಕೆ?

ಭಾನುವಾರ ‘ದಿಟ್ಟೆಯರು ಮತ್ತು ಜಗದ ಪರಿವರ್ತನೆ’ ಗೋಷ್ಠಿಯಲ್ಲಿ ಸಭಿಕರೊಬ್ಬರು ಮುಂದಿಟ್ಟ ಈ ಪ್ರಶ್ನೆ ಚರ್ಚೆಗೆ ಗ್ರಾಸವಾಯಿತು. ಲೈಂಗಿಕತೆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಮಹಿಳೆ ಮುಜುಗರ ಪಡುವ ಅಗತ್ಯ ಇಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ ಲೇಖಕಿಯರು ಅಭಿಪ್ರಾಯಪಟ್ಟರು.

ಅಂಕಣಗಾರ್ತಿ ಕಿರಣ್ ಮನ್ರಾಲ್, ‘ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಹೋಗಲಾಡಿಸಬೇಕಿದೆ’ ಎಂದರು.

‘1970ರ ದಶಕದಲ್ಲಿ ಕಮಲಾದಾಸ್ ಅವರು ಲೈಂಗಿಕತೆ ಬಗ್ಗೆ ಬರೆದಾಗ ಇದ್ದ ಮಡಿವಂತಿಕೆಯ ವಾತಾವರಣ ಈಗಲೂ ಬದಲಾಗಿಲ್ಲ. ಮಹಿಳೆಯರು ಈ ವಿಚಾರದಲ್ಲಿ ಇನ್ನಷ್ಟು ಮುಕ್ತತೆ ರೂಢಿಸಿಕೊಳ್ಳಬೇಕಿದೆ’ ಎಂದು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಲೇಖಕಿ ಸಜಿತಾ ನಾಯರ್ ಅಭಿಪ್ರಾಯಪಟ್ಟರು.

‘ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಹಾಗೂ ಆಕೆಯ ಕುರಿತು ಸಮಾಜ ಹೊಂದಿರುವ ಮನೋವೃತ್ತಿಗಳು ಬದಲಾಗುತ್ತಿರಬಹುದು. ಆದರೆ ಮಹಿಳೆ ಈಗಲೂ ಸಮಸ್ಯೆ ಎದುರಿಸುತ್ತಿದ್ದಾಳೆ. ಕಚೇರಿಯಲ್ಲಿ ತಡರಾತ್ರಿವರೆಗೆ ಉಳಿದು, ಸಿಬ್ಬಂದಿಯಿಂದ ಶಿಸ್ತಿನಿಂದ ಕೆಲಸ ತೆಗೆಸಿಕೊಳ್ಳುವ ಪುರುಷನನ್ನು ಸಭ್ಯನಂತೆ ಚಿತ್ರಿಸಲಾಗುತ್ತದೆ. ಆದರೆ, ಮಹಿಳೆಯೊಬ್ಬಳು ಆ ರೀತಿ ನಡೆದುಕೊಂಡಾಗ ಆಕೆಯ ಪ್ರತಿಭೆಯನ್ನು ಪ್ರಶಂಸಿಸುವ ಬದಲು ಕಳಂಕ ಹಚ್ಚುವ ಪ್ರಯತ್ನಗಳು ನಡೆಯುತ್ತದೆ’ ಎಂದು ಲೇಖಕಿ ಜೇನ್ ಡಿ ಸೂಜಾ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.