ಚುನಾಯಿತ ಪ್ರತಿನಿಧಿಗಳಷ್ಟೇ ಪೌರಾಯುಕ್ತರು ಸಹ ಮುಖ್ಯ. ಜಿಲ್ಲಾ ಕೇಂದ್ರದ ನಗರಸಭೆಗೆ ಪೌರಾಯುಕ್ತರ ನೇಮಕವಾಗಿಲ್ಲ. ಈ ಹಿಂದೆ ಯಾವತ್ತಾದರೂ ಈ ರೀತಿಯಲ್ಲಿ ಆಗಿತ್ತಾ ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ. ಇವರಿಗೆ ಹೊಸ ಪೌರಾಯುಕ್ತರ ನೇಮಕ ಮಾಡಿಸಲೂ ಆಗುತ್ತಿಲ್ಲ. ಪೌರಾಯುಕ್ತರು ಇದಿದ್ದರೆ ಇ–ಖಾತೆ ಸ್ವಚ್ಛತೆ ಕುಡಿಯುವ ನೀರು ಪೂರೈಕೆ ಸೇರಿದಂತೆ ನಾಗರಿಕರ ಸಮಸ್ಯೆಗಳು ಪರಿಹಾರವಾಗುತ್ತಿದ್ದವು ಎಂದಿದ್ದಾರೆ.
‘ಯಾರೂ ಸಿಗುತ್ತಿಲ್ಲ’
‘ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಈ ಹುದ್ದೆಗೆ ಅರ್ಹರಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಹೋದರು. ಆದರೆ ಈಗ ಗ್ರೇಡ್ 1 ಪೌರಾಯುಕ್ತರು ಯಾರೂ ಸಿಗುತ್ತಿಲ್ಲ ಎಂದು ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ತಿಳಿಸಿದರು. ಯಾವ ಕಾರಣಕ್ಕೆ ನ್ಯಾಯಾಲಯಕ್ಕೆ ಹೋದರೊ ಗೊತ್ತಿಲ್ಲ. ತಪ್ಪು ಆಗಿದೆ. ಆದರೆ ರಾಜ್ಯದಲ್ಲಿ ನಗರಸಭೆ ಪೌರಾಯುಕ್ತ ಹುದ್ದೆಗಳಿಗೆ ಗ್ರೇಡ್ 1 ಅಧಿಕಾರಿಗಳು ಸಿಗುತ್ತಿಲ್ಲ. ಗ್ರೇಡ್ 2 ಅಧಿಕಾರಿ ಪೌರಾಯುಕ್ತರಾಗಿ ಬಂದರೆ ಮತ್ತೆ ಗೊಂದಲ ಸೃಷ್ಟಿ ಆಗುತ್ತದೆ ಎಂದು ತಿಳಿಸಿದರು.