ಶಿಡ್ಲಘಟ್ಟ: ನಗರದ ಕೋಟೆ ವೃತತ್ದ ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿಯಿಂದ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರ ಕುಮಾರ್ ಮಾತನಾಡಿ, ‘ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳು ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಎಲ್ಲ ದಿನ ಮತ್ತು ಬದುಕಿನುದ್ದಕ್ಕೂ ಕನ್ನಡದ ಉತ್ಸವ ನಡೆಯಬೇಕು’ ಎಂದು ಪ್ರತಿಪಾದಿಸಿದರು.

ಮಕ್ಕಳು ಅಗತ್ಯ ಬಿದ್ದರೆ ಮಾತ್ರವೇ ಮೊಬೈಲ್ ಬಳಸಬೇಕು. ಉಳಿದ ಸಮಯದಲ್ಲಿ ಪಠ್ಯಪುಸ್ತಕಗಳ ಜತೆಗೆ ಒಳ್ಳೆಯ ಸಾಹಿತ್ಯ ಪುಸ್ತಕಗಳನ್ನು ಓದಬೇಕು. ಜ್ಞಾನಪೀಠ ಪ್ರಶಸ್ತಿ ಬಂದ ಪುಸ್ತಕಗಳನ್ನು ಓದಿ, ಕಾನೂನು ಜ್ಞಾನ, ಮಕ್ಕಳ ಹಕ್ಕುಗಳು ಸೇರಿ ಅನೇಕ ವಿಷಯಗಳ ಪುಸ್ತಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಕನ್ನಡ ಭಾಷೆಯಲ್ಲಿ ನಮ್ಮ ಬದುಕು ಮತ್ತು ಉಸಿರು ಅಡಗಿದೆ. ಭಾಷೆಯ ಅಳಿವು ಅಂದರೆ ಅದು ಕನ್ನಡಿಗರ ಅಳಿವು ಆಗಲಿದೆ. ಕನ್ನಡ ಭಾಷೆಗೂ ಕನ್ನಡಿಗರಿಗೂ ಅಳಿವು ಇಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವು ದೊಡ್ಡ ಹೋರಾಟ ಮಾಡಬೇಕಿಲ್ಲ. ಬದುಕಿನ ಉದ್ದಕ್ಕೂ ಕನ್ನಡ ಮಾತನಾಡಿ ಬರೆಯುವುದು ಮಾಡಿದರೆ ಸಾಕು’ ಎಂದರು.

ಶಾಲಾ–ಕಾಲೇಜು ಹಾಗೂ ನೃತ್ಯ ತರಗತಿ ವಿದ್ಯಾರ್ಥಿಗಳು ಕನ್ನಡದ ಅನೇಕ ಗೀತೆಗಳಿಗೆ ನೃತ್ಯ ಮಾಡಿದರು. ಭರತ ನಾಟ್ಯ ಪ್ರದರ್ಶನವೂ ಗಮನ ಸೆಳೆಯಿತು.

ಜೂನಿಯರ್ ರಾಜ್ ಕುಮಾರ್ ಮತ್ತು ಜೂನಿಯರ್ ರವಿಚಂದ್ರನ್ ಅವರು ಸಿನಿಮಾನದ ಡೈಲಾಗ್ ಹೊಡೆದು, ನಟನೆ ಮಾಡಿ ಸಭಿಕರ ಗಮನ ಸೆಳೆದರು. ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿಕೊಂಡರು. ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಮಾರುಕಟ್ಟೆ ಡಿಡಿ ಮಹದೇವ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿಯ ಸೀಕಲ್ ಆನಂದಗೌಡ, ಕಾಂಗ್ರೆಸ್ನ ನಂದ ಮುನಿಕೃಷ್ಣಪ್ಪ, ಆಂಜಿನಪ್ಪ, ಮನೋಹರ್, ಕೃಷ್ಣಮೂರ್ತಿ, ರಾಜ್ಕುಮಾರ್, ಡಾಲ್ಫಿನ್ ಅಶೋಕ್, ಸಮಾನ ಮನಸ್ಕರ ವೇದಿಕೆಯ ಮುನಿಕೆಂಪಣ್ಣ, ರಾಮಾಂಜಿನೇಯ, ಪಟೇಲ್ ನಾರಾಯಣಸ್ವಾಮಿ, ರವಿಪ್ರಕಾಶ್, ಪ್ರತೀಶ್, ದಿಲೀಪ್ ಕುಮಾರ್, ವಿಸ್ಡಂ ನಾಗರಾಜ್, ವರದರಾಜು, ಮುನಿರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.