ಬಾಗೇಪಲ್ಲಿ: ವಿದ್ಯಾರ್ಥಿ ದೆಸೆಯಿಂದಲೇ ಸಂಸ್ಕಾರಯುತ ಶಿಕ್ಷಣ ಕಲ್ಪಿಸಬೇಕಾಗಿದೆ ಎಂದು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಮಂಗಳನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾತೃಭೋಜನ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಭವಿಷ್ಯ ರೂಪಿಸಿಕೊಳ್ಳುವ ವಸ್ತುಗಳನ್ನು ಹಾಗೂ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಬೇಕು. ವಿದ್ಯಾರ್ಥಿಗಳ ನಡವಳಿಕೆ, ಹಾಜರಾತಿ, ಓದುವ ಮಾಹಿತಿ, ಅಂಕಗಳ ಗಳಿಕೆಯ ಬಗ್ಗೆ ಸದಾ ಪೋಷಕರು ಎಚ್ಚರಿಕೆಯಿಂದ ಇರಬೇಕು. ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಮುದಾಯದ, ಕುಟುಂಬಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಂಸ್ಕಾರ ಶಿಕ್ಷಣವನ್ನು ಬಾಲ್ಯದಿಂದಲೇ ಕಲಿಸಬೇಕು. ಮಕ್ಕಳಲ್ಲಿ ಸೌಹಾರ್ದ, ಸಮಬಾಳ್ವೆ ಹಾಗೂ ಭಾವೈಕ್ಯ ಮೂಡಿಸಬೇಕು. ಜಾತಿ, ಧರ್ಮಗಳ ಎಂಬ ಬೇಧಭಾವ ಇಲ್ಲದೇ ಸಾಮೂಹಿಕವಾಗಿ ತಿಂಡಿತಿನಿಸು ಸೇವಿಸುವ ಮಾತೃಭೋಜನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ಆರ್.ವರ್ಣಿ ಮಾತನಾಡಿ, ‘18 ವರ್ಷದ ಒಳಗಿನವರು ದ್ವಿಚಕ್ರ ಹಾಗೂ ವಾಹನ ಚಾಲನೆ ಮಾಡಬಾರದು. ಬಾಲ್ಯವಿವಾಹ ತಡೆಯುವುದು ಪ್ರತಿಯೊಬ್ಬರು ಜವಾಬ್ದಾರಿ ಆಗಬೇಕು. ಪೋಕ್ಸೋ ಪ್ರಕರಣ ಹಾಗೂ ದುರಾಭ್ಯಾಸಗಳ ಬಗ್ಗೆ ತಮ್ಮ ಮಕ್ಕಳ ಕಡೆ ಸದಾ ಎಚ್ಚರದಿಂದ ಇರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಸುಜಾತಾನಾಯ್ಡು, ಸದಸ್ಯ ಬಿ.ಎ.ನರಸಿಂಹಮೂರ್ತಿ, ಪ್ರಾಂಶುಪಾಲ ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.