ವಿಟ್ಲ: ಸಹಸ್ರಾರು ಜನ, ವಾಹನ ಓಡಾಡುವ ವಿಟ್ಲ- ಪುತ್ತೂರು ರಸ್ತೆ ಬದಿಯಲ್ಲಿರುವ ಬಸ್ ನಿಲ್ದಾಣಕ್ಕೆ ಭಾರಿ ಮರವೊಂದು ತಾಗಿಕೊಂಡಿದೆ. ಸಂಪೂರ್ಣವಾಗಿ ರಸ್ತೆಗೆ ಬಾಗಿಕೊಂಡಿರುವ ಮರ ಯಾವುದೇ ಕ್ಷಣ ಉರುಳಿ ಬೀಳುವ ಅಪಾಯ ಇದ್ದು, ಸ್ಥಳೀಯಾಡಳಿತ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಗಳ ಮಂಟಪ ಸಿಪಿಸಿಆರ್ಐ ಗೇಟಿನ ಬಳಿ ಇರುವ ಪ್ರಯಾಣಿಕರ ನಿಲ್ದಾಣ ಅವಸ್ಥೆಯಿಂದ ಕೂಡಿದೆ. ಆಲದ ಮರ ಮತ್ತು ಎಚ್ಟಿ ವಿದ್ಯುತ್ ತಂತಿ ಬಿದ್ದರೆ ಅವಘಡ ಉಂಟಾಗುವ ಭೀತಿ ಇದೆ. ಇದನ್ನು ಶೀಘ್ರವಾಗಿ ಸರಿಪಡಿಸಬೇಕು ಎಂದು ಮೆಸ್ಕಾಂ ಸಭೆಯಲ್ಲಿ ಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದರು.

ಕಂಟೇನರ್ ಹಾಗೂ ಭಾರಿ ವಾಹನಗಳು ಸಂಚರಿಸುವಾಗ ಕೊಂಬೆಗಳು ಸ್ಪರ್ಶಿಸುತ್ತವೆ. ಮರದ ಬುಡವು ಬಿರುಕು ಬಿಟ್ಟಿದ್ದು, ಜೋರಾಗಿ ಗಾಳಿ ಬೀಸಿದರೆ ಮರವೇ ಬುಡದಿಂದ ಕಿತ್ತುಕೊಂಡು ರಸ್ತೆಗೆ ಬೀಳುವ ಆತಂಕವೂ ಇದೆ. ಅರಣ್ಯ ಇಲಾಖೆ ಎಚ್ಚೆತ್ತು ಕೂಡಲೇ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು, ವಾಹನ ಸವಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.