ಮಂಗಳೂರು: ‘ಅಭೇದ್ಯ ರಹಸ್ಯಗಳನ್ನು ಭೇದಿಸುತ್ತ ಸಾಗುವ ಕಥಾ ಹಂದರವಿರುವ ಪ್ರೇಮಕಥೆ ಆಧರಿತ ‘ತುಡರ್’ ತುಳು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ’ ಎಂದು ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದ ಮೋಹನ್ ರಾಜ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ವಿಭಿನ್ನ ಕಥೆಯಾಧಾರಿತ ತುಡರ್ ಸಿನೆಮಾದ ಚಿತ್ರೀಕರಣ 17 ದಿನಗಳಿಂದ ನಡೆಯುತ್ತಿದೆ. ಇನ್ನೂ 15 ದಿನಗಳ ಚಿತ್ರೀಕರಣ ಬಾಕಿ ಇದೆ’ ಎಂದು ತಿಳಿಸಿದರು.

‘ವಿಲ್ಸನ್ ರೆಬೆಲ್ಲೊ ಹಾಗೂ ಹರೀಶ್ ಶೆಟ್ಟಿ ನಿರ್ಮಾಣದ ಈ ಸಿನಿಮಾವನ್ನು ಎಲ್ಟನ್ ಮಸ್ಕರೇನಸ್ ಹಾಗೂ ತೇಜಸ್ ಪೂಜಾರಿ ನಿರ್ದೇಶನ ಮಾಡುತ್ತಿದ್ದಾರೆ. ಅರವಿಂದ ಬೋಳಾರ್, ರೂಪಾ ವರ್ಕಾಡಿ, ಸಿದ್ದಾರ್ಥ್ ಶೆಟ್ಟಿ, ದೀಕ್ಷಾ ಸಹಿತ ಹಲವು ಪ್ರಸಿದ್ಧ ನಟರು ತಾರಾಬಳಗದಲ್ಲಿದ್ದಾರೆ. ಪ್ರೊಡಕ್ಷನ್ ಮ್ಯಾನೆಜರ್ ಆಗಿ ಕಾರ್ತಿಕ್ ರೈ ಹಾಗೂ ವಿಜೇತ್ ಆರ್.ನಾಯಕ್ ಸಹಕರಿಸಿದ್ದಾರೆ. ಪ್ರವೀಣ್ ನೃತ್ಯ ನಿರ್ದೇಶಕ ನಡೆಸಿದ್ದಾರೆ’ ಎಂದರು.

ನಿರ್ದೇಶಕ ಎಲ್ಟನ್ ಮಸ್ಕರೇನಸ್, ಚಿತ್ರತಂಡದ ವಿಲ್ಸನ್ ರೆಬೆಲ್ಲೊ, ತೇಜಸ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.