ಉಪ್ಪಿನಂಗಡಿ (ದಕ್ಷಿಣ ಕನ್ನಡ): ಸಮೀಪದ ಇಚ್ಲಂಪಾಡಿಯಲ್ಲಿ ಮರಳು ತೆಗೆಯುವ ಕಾರ್ಮಿಕರೊಬ್ಬರು ಸಿಡಿಲು ಬಡಿದು ಶನಿವಾರ ಸಾವಿಗೀಡಾಗಿದ್ದಾರೆ. ಅವರ ಜೊತೆ ಇದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಚೈನ್ಪುರ್ನ ಶ್ರೀಕಿಸೂನ್ (56) ಎಂದು ಗುರುತಿಸಲಾಗಿದೆ. ಗಾಯಗೊಂಡವರ ಹೆಸರು ವಿಳಾಸ ಗೊತ್ತಾಗಿಲ್ಲ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಡಬ ತಾಲ್ಲೂಕಿನ ಇಚ್ಲಂಪಾಡಿಯ ಬಳಿ ನದಿಯಿಂದ ಮರಳು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ನದಿ ಬದಿಯಲ್ಲಿ ಶೆಡ್ನಲ್ಲಿ ಅವರು ಉಳಿದುಕೊಂಡಿದ್ದರು.

‘ಮೂವರು ಕಾರ್ಮಿಕರು ಶೆಡ್ನಲ್ಲಿದ್ದಾಗ ಸಿಡಿಲು ಬಡಿದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.