ಮಂಗಳೂರು: ನಗರದ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಉದ್ದೇಶಿಸಿ ಯುವಕನೊಬ್ಬ ‘ಹಣ ಕೊಡುತ್ತೇನೆ, ನನ್ನ ಜೊತೆಗೆ ಬರುತ್ತೀಯಾ’ ಎಂದು ಅಸಭ್ಯವಾಗಿ ಕರೆಯುತ್ತಿದ್ದ ಎಂದು ಯುವತಿಯರು ಆರೋಪಿಸಿದ್ದಾರೆ. ಆ ಯುವಕನನ್ನು ಯುವತಿಯರೇ ಹಿಡಿದು ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ.

ಬರ್ಮುಡಾ ಮತ್ತು ಕಪ್ಪುಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕನ ವರ್ತನೆಯಿಂದ ಯುವತಿಯರಿಬ್ಬರು ಸಿಟ್ಟಿಗೆದ್ದಿದ್ದರು. ‘ರಸ್ತೆಯಲ್ಲಿ ಹೋಗುವ ಹುಡುಗಿಯರನ್ನೆಲ್ಲ ಹಣಕ್ಕೆ ಬರುತ್ತೀರಾ ಎಂದು ಕರೆಯುತ್ತೀಯಾ. ಏನಿದರ ಅರ್ಥ? ನಿನ್ನ ತಾಯಿಗೂ ಈ ರೀತಿ ಹೇಳುತ್ತೀಯಾ’ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದರು. ಆತನ ವರ್ತನೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ತನ್ನ ಹತ್ತಿರ ಬಂದ ಆತನನ್ನು ಯುವತಿಯೊಬ್ಬಳು ಹಿಡಿಯಲು ಯತ್ನಿಸಿದ್ದಳು. ಆಗ ಆತ ಧರಿಸಿದ್ದ ಟೀ–ಶರ್ಟ್ ಅನ್ನು ತೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಛಲ ಬಿಡದೆ ಆತನನ್ನು ಹಿಡಿದ ಯುವತಿಯರು ಮಹಿಳಾ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮಹಿಳಾ ಠಾಣೆಗೆ ಯುವತಿ ದೂರು ನೀಡಿದ್ದಾರೆ. ಕೃತ್ಯ ವೆಸಗಿದ ಪುರುಷನ ಹೆಸರು ಶಬರಿ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.