ವಿಟ್ಲ: ಕರಾವಳಿಯ ಶಾಲೆಗಳಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ತುಳು ಭಾಷೆಗೂ ಮಾನ್ಯತೆಯಿರಬೇಕು. ಪಾಶ್ಚಾತ್ಯ ಭಾಷೆಯಿರಲಿ, ಆದರೆ ಪಾಶ್ಚಾತ್ಯ ಸಂಸ್ಕೃತಿ ಬೇಡ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ತುಳು ಕೂಟೊ, ಬೊಳ್ಳಿ ಪರ್ಬ ಕೂಟ, ಕರೋಪಾಡಿ- ಕನ್ಯಾನ ಗ್ರಾಮ ಸಮಿತಿಗಳ ಸಹಯೋಗದಲ್ಲಿ ಭಾನುವಾರ ಒಡಿಯೂರು ಗುರುದೇವ ಜ್ಞಾನ ಮಂದಿರದಲ್ಲಿ ತುಳು ನಡಕೆದೈಸಿರೊ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು

ತುಳುವರು ಹೃದಯ ವೈಶಾಲ್ಯತೆ ಉಳ್ಳವರು. ತುಳುವರೆಲ್ಲರೂ ಒಗ್ಗಟ್ಟಾಗಿ ಇಲ್ಲಿನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಆಂಗ್ಲ ಭಾಷೆ ದೇಹನಿಷ್ಠ ಸಂಸ್ಕೃತಿಗೆ ಸಂಬಂಧಿಸಿದ್ದು. ನಮ್ಮತನಕ್ಕೆ ಅವಶ್ಯವಿರುವ ಆತ್ಮನಿಷ್ಠ ಸಂಸ್ಕೃತಿಯನ್ನು ನೆಚ್ಚಿಕೊಂಡು ಬಾಳಬೇಕು. ಎಂದರು.

ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಶಬ್ದಗಳು ಅರ್ಥ ಕಳೆದುಕೊಳ್ಳಬಹುದು. ಭಾಷೆ, ಸಂಸ್ಕೃತಿ ಅಳಿಯಲಾರದು. ಅದನ್ನು ಭಾವನಾತ್ಮಕವಾಗಿ ಉಳಿಸುವುದು ಇಂದಿನ ಕರ್ತವ್ಯವಾಗಿದೆ. ಒಡಿಯೂರು ಶ್ರೀಗಳು ಸಂಕಲ್ಪಿಸಿದ ತುಳು ಭಾಷೆಯ ಉಳಿವಿನ ಹೋರಾಟಕ್ಕೆ ತುಳುವರೆಲ್ಲರೂ ಒಟ್ಟಾಗಬೇಕು ಎಂದರು.

ಸಾಧ್ವಿ ಮಾತಾನಂದಮಯೀ, ಕನ್ಯಾನ ಗ್ರಾ.ಪಂ.ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ, ಮೈಸೂರಿನ ವಕೀಲ ಒ.ಶ್ಯಾಮ ಭಟ್ ಮಾತನಾಡಿದರು. ಒಡಿಯೂರಿನ ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮ ರೈ, ಕನ್ಯಾನ ಗ್ರಾಮ ಬೊಳ್ಳಿ ಪರ್ಬ ಸಮಿತಿ ಅಧ್ಯಕ್ಷ ರಘುನಾಥ ರೈ ಅರ್ಪಿಣಿ, ಕೇಂದ್ರ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಒಡಿಯೂರು ಮೊದಲಾದವರು ಉಪಸ್ಥಿತರಿದ್ದರು.

ಕರೋಪಾಡಿ ಗ್ರಾಮ ಬೊಳ್ಳಿ ಪರ್ಬ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು. ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.