ದಾವಣಗೆರೆ: ಸಂಯುಕ್ತ ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವಾಗ ಅಧಿಕಾರಿಗಳು ಮೈಮರೆತು ಕುಳಿತುಕೊಳ್ಳಬಾರದು. ಗುಣಮಟ್ಟದ ಕಟ್ಟಡ ಆದಷ್ಟು ಬೇಗ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಎಂಜನಿಯರಿಂಗ್ ಘಟಕದ ವತಿಯಿಂದ ನಾಗಮ್ಮ ಕೇಶವ ಮೂರ್ತಿ ಬಡಾವಣೆಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಸಂಯುಕ್ತ ಆಯುಷ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಉತ್ತಮ ಆಸ್ಪತ್ರೆಗಳಿಂದಾಗಿ ಮನುಷ್ಯನ ಆಯುಷ್ಯ ಹೆಚ್ಚಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ಚಿಕಿತ್ಸೆ ಜತೆಗೆ ವಿರಾಮ ಪಡೆದು ಬರುತ್ತಿದ್ದಾರೆ. ಇನ್ನು ಮುಂದೆ ಇಲ್ಲೇ ಅಂಥ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.

ತಗ್ಗು ಪ್ರದೇಶದಲ್ಲಿ ಇರುವುದರಿಂದ ಕೆಳಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಮೊದಲ ಮಹಡಿಯಿಂದ ಆಸ್ಪತ್ರೆ ಇರಲಿ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್, ‘ಪ್ರಕೃತಿಯ ಮಡಿಲಲ್ಲಿರುವ ಈ ಜಾಗ ಪ್ರಕೃತಿಯ ಚಿಕಿತ್ಸೆಗೆ ಉತ್ತಮವಾಗಿದೆ. ನಮ್ಮ ಜನರು ಪ್ರಕೃತಿ ಚಿಕಿತ್ಸೆಗೆಂದು ಉಜಿರೆಗೆ ಹೋಗುತ್ತಿದ್ದಾರೆ. ಮುಂದೆ ಇಲ್ಲೇ ಈ ಚಿಕಿತ್ಸೆ ಪಡೆಯಬಹುದು’ ಎಂದರು.

ನಮ್ಮ ಜಿಲ್ಲೆಯ ಜನರಿಗೆ ಮುಂದಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆಗೆ ಇಲ್ಲಿ ನಿರ್ಮಾಣವಾಗುವ ಆಯುಷ್ ಆಸ್ಪತ್ರೆ ಸೌಲಭ್ಯ ಸಿಗುವಂತಾಗಲಿ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಯು.ಸಿದ್ದೇಶಿ, ‘ಆಯುರ್ವೇದ, ಹೋಮಿಯೋಪಥಿ, ಯುನಾನಿ, ಯೋಗ ಮತ್ತು ಸಿದ್ಧೌಷಧ ಈ ಐದನ್ನು ಸಂಯುಕ್ತ ಆಯುಷ್ ಒಳಗೊಂಡಿರುತ್ತದೆ. ದಾವಣಗೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಯುಕ್ತ ಆಯುಷ್ ಆಸ್ಪತ್ರೆಯಲ್ಲಿ ಸಿದ್ಧೌಷಧ ಬಿಟ್ಟು ಉಳಿದ ನಾಲ್ಕು ಇರಲಿವೆ. ಮೂರು ವರ್ಷದ ಹಿಂದೆ ರಾಜ್ಯ ಸರ್ಕಾರ ಈ ಆಸ್ಪತ್ರೆ ಮಂಜೂರು ಮಾಡಿತ್ತು. ಕಳೆದ ವರ್ಷ ಆಡಳಿತಾತ್ಮಕ ಅನುಮೋದನೆ ನೀಡಿದೆ. ₹ 7.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಆಸ್ಪತ್ರೆಗೆ ಆರಂಭಿಕ ಮೊತ್ತವಾಗಿ ₹ 2.5 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ. ನಿಂಗಣ್ಣ, ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಪ್ಪ, ಬಿಸ್ಲೇರಿ ವೀರಣ್ಣ, ಗುಡ್ಡಣ್ಣ, ಮಲ್ಲಿಕಾರ್ಜುನ ಕಾರ್ಯಪಾಲಕ ಎಂಜಿನಿಯರ್ ನವೀನ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.