ಹೊಳಲ್ಕೆರೆ: ಕವಿ ಚಂದ್ರಶೇಖರ ತಾಳ್ಯ ಅವರ ನಿವಾಸಕ್ಕೆ ಗುರುವಾರ ಅನಾಮಧೇಯ ಪತ್ರವೊಂದು ಬಂದಿದ್ದು, ‘ನಿಮ್ಮಂತಹ ದುರ್ಬುದ್ಧಿ ಸಾಹಿತಿಗಳು ಅಳಿಯಲಿ, ನಶಿಸಿ ಹೋಗಲಿ’ ಎಂದು ಬರೆಯಲಾಗಿದೆ.

‘ನಮ್ಮ ಪಾಠಗಳನ್ನು ಪಠ್ಯದಿಂದ ವಾಪಸ್ ಪಡೆದಿದ್ದೇವೆ ಎಂದು ಹೇಳಿರುವ ಎಲ್ಲರಿಗೂ ಧನ್ಯವಾದಗಳು. ಇಷ್ಟು ದಿನ ಓದಿದ್ದ ನಿಮ್ಮ ಪಾಠಗಳು ಮರೆತು ಹೋಗಲಿ ಎಂದು ಸರಸ್ವತಿಯಲ್ಲಿ ಬೇಡಿಕೊಳ್ಳುತ್ತೇವೆ. 61 ಜನ ನಕಲಿ ದೇಶದ್ರೋಹಿ ಸಾಹಿತಿಗಳೇ ನಿಮ್ಮ ಆಲೋಚನೆಗಳು ದೇಶವನ್ನು ಒಡೆಯುತ್ತವೆ ಎಂಬ ಒಕ್ಕಣಿಕೆ ಇರುವ ಪತ್ರ ಪಟ್ಟಣದ ಬಸವಾ ಲೇಔಟ್ನಲ್ಲಿರುವ ತಾಳ್ಯ ಅವರ ನಿವಾಸಕ್ಕೆ ಬಂದಿದೆ.

‘ನಿಮ್ಮಂಥ ಎಡಬಿಡಂಗಿ ಸಾಹಿತಿಗಳು ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿದ್ದೀರಿ. ನಮ್ಮ ಮಕ್ಕಳು ನಿಮ್ಮ ಗದ್ಯ, ಪದ್ಯ ಮರೆತು ದೇಶಭಕ್ತಿಯ ಪಾಠ ಕಲಿಯಲಿ. ಶ್ರೀಕೃಷ್ಣ, ಕುವೆಂಪು ಹೇಳಿದಂತೆ ‘ಸರ್ವೇ ಜನೋ ಸುಖಿನೋಭವಂತು’, ‘ಮನುಜಮತ ವಿಶ್ವಪಥ’ ಎಂಬುದನ್ನು ನಮ್ಮ ಮಕ್ಕಳು ತಿಳಿಯಲಿ. ನಿಮ್ಮಂಥ ದುರುಳರು ಅಳಿಯಲಿ’ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಕೊನೆಯಲ್ಲಿ ‘ಸಹಿಷ್ಣು ಹಿಂದೂ’ ಎಂದು ಬರೆಯಲಾಗಿದೆ.

ತಾಳ್ಯ ಅವರು 6ನೇ ತರಗತಿಯ ಉರ್ದು ಮಾಧ್ಯಮದ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿದ್ದ ತಮ್ಮ ‘ಒಂದು ಜೋಗುಳದ ಪದ್ಯ’ ಪಠ್ಯವನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದರು.

‘ಪತ್ರ ನೋಡಿದರೆ ಚಿಕ್ಕಮಕ್ಕಳ ಬರವಣಿಗೆಯಂತೆ ಕಾಣುತ್ತದೆ. ಯಾರೋ ಹೇಳಿ ಮಕ್ಕಳ ಕೈಯಲ್ಲಿ ಪತ್ರ ಬರೆಸಿರಬಹುದು’ ಎಂದು ಚಂದ್ರಶೇಖರ ತಾಳ್ಯ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.