ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗರಿಗೆದರಿದ ಅರಣ್ಯ ಅಭಿವೃದ್ಧಿ ಚಟುವಟಿಕೆ: ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ಲಭ್ಯ

ಪುಟ್ಟಪ್ಪ ಲಮಾಣಿ
Published : 7 ಜುಲೈ 2024, 5:44 IST
Last Updated : 7 ಜುಲೈ 2024, 5:44 IST
ಫಾಲೋ ಮಾಡಿ
Comments

ತಡಸ (ದುಂಡಶಿ): ಮುಂಗಾರು ಮಳೆ ಅಬ್ಬರದ ನಡುವೆಯೇ ದುಂಡಶಿ ಅರಣ್ಯ ವಲಯದ ಅರಣ್ಯ ಅಭಿವೃದ್ಧಿ ಚಟುವಟಿಕೆ ಗರಿಗದರಿದೆ. ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ ವಿವಿಧ ಕಡೆ ಸಸಿ ನಡುವ ಕಾರ್ಯ ಜೋರಾಗಿದೆ.

ಪ್ರಸಕ್ತ ವರ್ಷ ದುಂಡಶಿ ಉಪ ವಿಭಾಗದಲ್ಲಿ ಅರಣ್ಯ ಇಲಾಖೆಯ ಅರಣ್ಯ ಕಿರಣ ಪ್ರಕ್ರಿಯೆ ಚುರುಕಾಗಿ ನಡೆದಿದ್ದು ಮುಕ್ತಾಯದ ಹಂತದಲ್ಲಿದೆ. ವಿವಿಧ ಭಾಗಗಳಲ್ಲಿ ಅರಣ್ಯ ಇಲಾಖೆಯಯವರು ಹಲವು ಬಗೆಯ ತಳಿಯ ಸಸಿಗಳನ್ನು ನೆಡುತ್ತಿದ್ದರೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ನರ್ಸರಿಗಳಲ್ಲಿ ಬೆಳೆಯಲಾದ ಸಸಿಗಳನ್ನು ಎಲ್ಲ ಗ್ರಾಮಗಳಿಗೆ ತಲುಪಿಸಲಾಗುತ್ತಿದೆ.

ಅರಣ್ಯ ಇಲಾಖೆಗೆ ಸಂಬಂಧಿಸಿದ ಸಸ್ಯಪಾಲನ ಮಡ್ಲಿ ಹಾಗೂ ಸಾಮಾಜಿಕ ಅರಣ್ಯ ಜಕ್ಕನಕಟ್ಟಿ ಕ್ಷೇತ್ರಗಳಿವೆ ಸುಮಾರು 15 ಸಾವಿರ ಸಸಿಗಳು ರೈತರಿಗೆ ರಿಯಾಯಿತಿ ದರದಲ್ಲಿ (₹3, ₹6, ₹9) ಲಭ್ಯವಿದೆ.

ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಕ್ಕೆ ಹಂಚಿಕೊಂಡಿರುವ ಈ ಪ್ರದೇಶ ಹೊಂದಿಕೊಳ್ಳುವ ಜಾತಿಯ ಸಸಿಗಳು ಆಲ, ಅರಳಿ, ಗೋಣಿ, ಹೊಂಗೆ, ತೇಗ ,ಬಿದಿರು ನೇರಳೆ, ಶ್ರೀಗಂಧ ಸಿಲ್ವರ್ ವೋಕ್ ಲಿಂಬು ಕರಿಬೇವು, ಸಾಗವಾನಿ, ಮಹಾಗನಿ, ಹಲಸು ಮುಂತಾದ ಸಸಿಗಳು ರೈತರಿಗೆ ಲಭ್ಯವಿದೆ.

‘ದುಂಡಸಿ ಉಪ ವಿಭಾಗದಲ್ಲಿ ಅರಣ್ಯ ಇಲಾಖೆಯ ನರೇಗಾ ಯೋಜನೆಯಡಿ ಸುಮಾರು 10 ಸಾವಿರ ಸಸಿಗಳನ್ನು ನೆಡಲಾಗಿದೆ. ಇದರಿಂದ ಹಲವಾರು ಕಾರ್ಮಿಕರಿಗೆ ಮಳೆಗಾಲದಲ್ಲಿ ಕೆಲಸ ಸಿಕ್ಕಂತಾಗಿದೆ. ಮುಂಗಾರು ಮಳೆಯಲ್ಲಿ ಮನೆ ನಡೆಸುವ ಕಷ್ಟದಲ್ಲಿ ಅರಣ್ಯ ಇಲಾಖೆಯವರು ನರೇಗಾ ಯೋಜನೆಯಡಿ  ಕೆಲಸ ನೀಡಿದ್ದು, ಉತ್ತಮ ಕಾರ್ಯವಾಗಿದೆ’ ಎಂದು ನರೇಗಾ ಕೂಲಿ ಕಾರ್ಮಿಕ ಗೋಪಾಲ ಲಮಾಣಿ ಹೇಳಿದರು.

ಮಮದಾಪುರು ಗ್ರಾಮದಲ್ಲಿ ದುಂಡಸಿ ಉಪವಲಯ ಅರಣ್ಯ ಇಲಾಖೆ ನರೇಗಾ ಯೋಜನೆ ಅಡಿ ಸಸಿ ನೆಡುತ್ತಿರುವ ಕಾರ್ಮಿಕರು.
ಮಮದಾಪುರು ಗ್ರಾಮದಲ್ಲಿ ದುಂಡಸಿ ಉಪವಲಯ ಅರಣ್ಯ ಇಲಾಖೆ ನರೇಗಾ ಯೋಜನೆ ಅಡಿ ಸಸಿ ನೆಡುತ್ತಿರುವ ಕಾರ್ಮಿಕರು.
ರೈತರಿಗೆ ಪ್ರೋತ್ಸಾಹಧನ
ಮುಂಗಾರು ಮಳೆ ಉತ್ತಮವಾಗಿರುವುದರಿಂದ ರೈತರು ಸಸಿಗಳನ್ನು ನೆಡಲು ಸೂಕ್ತ ಸಮಯ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೆಟ್ಟು ಬದುಕುಳಿದ 3 ವರ್ಷದ ಸಸಿಗಳಿಗೆ ₹125 ಸಹಾಯಧನವನ್ನು ರೈತರಿಗೆ ನೀಡಲಾಗುತ್ತದೆ. ಸಸಿ ಬೇಕಾದ ರೈತರು ಮಡ್ಲಿ ನರ್ಸರಿಗೆ ಭೇಟಿ ನೀಡಿ ಎಂದು ದುಂಡಶಿ ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ ಪುರಾಣಿಕರಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT