ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ | ನಾಗಾವಿ ಯಲ್ಲಮ್ಮ ದೇಗುಲದಲ್ಲಿ ನವರಾತ್ರಿ ಉತ್ಸವ ಆರಂಭ

ದಸರಾ ಹಬ್ಬದ ಸಂಭ್ರಮಕ್ಕೆ ಭಾರತ ಮಾತಾ ಆರತಿ ಮೆರುಗು
Published : 3 ಅಕ್ಟೋಬರ್ 2024, 14:17 IST
Last Updated : 3 ಅಕ್ಟೋಬರ್ 2024, 14:17 IST
ಫಾಲೋ ಮಾಡಿ
Comments

ಚಿತ್ತಾಪುರ: ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ದಸರಾ ಹಬ್ಬದ ಸಂಪ್ರದಾಯದಂತೆ ನವರಾತ್ರಿ ಆಚರಣೆಯ ಕಾರ್ಯಕ್ರಮಗಳು ಆರಂಭವಾಗಿವೆ.

ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮಹಾಅಭಿಷೇಕ, ಹೂವಿನ ಅಲಂಕಾರ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ದೇವಿಯ ಗರ್ಭಗೃಹದಲ್ಲಿ ನವರಾತ್ರಿ ಉತ್ಸವದ ಘಟಸ್ಥಾಪನೆ ಮಾಡಲಾಯಿತು.

ಅ,11ರ ವರೆಗೆ ಪ್ರತಿದಿನ ದೇವಿಗೆ ಭಕ್ತರಿಂದ ಶೋಡೋಪಚಾರ ಪೂಜೆ ಸಹಿತ ಸಹಸ್ರ ಕುಂಕುಮಾರ್ಚನೆ, ನೈವೇದ್ಯ, ಮಹಾಮಂಗಳಾರತಿ ಮತ್ತು ಮಂತ್ರಪುಷ್ಪ ಸೇವೆ ಕಾರ್ಯಕ್ರಮಗಳು ನಡೆಯಲಿವೆ. 10ರಂದು ದುರ್ಗಾಷ್ಟಮಿ ನಿಮಿತ್ತ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನಡೆಯುವುದು. 12ರಂದು ದಸರಾ ಹಬ್ಬದ ದಿನ ದೇವಸ್ಥಾನದ ಆವರಣದಲ್ಲಿ ಶಮಿ ಪೂಜೆ (ಬನ್ನಿಗಿಡ) ಕಾರ್ಯಕ್ರಮ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಜರುಗುವುದು.

ಭಾರತ ಮಾತಾ ಆರತಿ ಕಾರ್ಯಕ್ರಮ: ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ ಸಂಘಟನೆಯಿಂದ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಆರತಿ ಮತ್ತು ಭಾರತ ಮಾತಾ ಆರತಿ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಅರ್ಚಕ ಶಿವಕುಮಾರ ಪೂಜಾರಿ ಹಾಗೂ ಆನಂದ ಸರಾಫ್, ಕಣ್ವ ನಾಯಕ ಅವರು ಜ್ಯೋತಿ ಪ್ರಜ್ವಲಿಸುವ ಮೂಲಕ ವಿಶೇಷ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇವಸ್ಥಾನದಲ್ಲಿ ನಿತ್ಯ ಸಂಪ್ರದಾಯದಂತೆ ನವರಾತ್ರಿ ಉತ್ಸವದ ಪೂಜೆ, ಆರತಿ ಬಳಿಕ ಮಹಿಳೆಯರಿಂದ ವಿಶೇಷ ಆರತಿ ಮತ್ತು ಭಾರತ ಮಾತಾ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ತಿನ ಪ್ರಾಂತ ಸೇವಾ ಸಹ ಪ್ರಮುಖರಾದ ಅಂಬರೀಶ ಸುಲೇಗಾಂವ ತಿಳಿಸಿದ್ದಾರೆ. 

ಆರತಿ ಕಾರ್ಯಕ್ರಮದಲ್ಲಿ ಬಜರಂಗದಳ ವಿಭಾಗ ಸಂಯೋಜಕ ಅಜೇಯ ಬಿದರಿ, ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ, ತಾಲ್ಲೂಕು ಸಂಯೋಜಕ ಮಲ್ಲಿಕಾರ್ಜುನ ಉಪ್ಪಾರ, ಹರ್ಷ ಸೂರ್ಯವಂಶಿ, ಹಣಮಂತ ಹೋಳಿಕಟ್ಟಿ, ಜಿಲ್ಲಾ ಮಾತೃಶಕ್ತಿ ಪ್ರಮುಖರಾದ ಸುವರ್ಣ ಶಿಲ್ಪಿ, ತಾಲ್ಲೂಕು ಪ್ರಮುಖರಾದ ರೇಣುಕಾ ಬಿರಾದಾರ, ದುರ್ಗಾವಾಹಿನಿ ಸಂಯೋಜಕಿ ಶೃತಿ ತಾವರೆ, ಸಹಸಂಯೋಜಕಿ ಶೃತಿ ಹೆಬ್ಬಾಳ, ಲಕ್ಷ್ಮಿ ಮಟ್ಟಿ, ಸಕ್ಕುಬಾಯಿ ಕುಲಕರ್ಣಿ, ನಿರ್ಮಲಾ ಭಂಗಿ, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ ನಾಗೇಶ ದೊಡ್ಡಮನಿ, ಶೀಲಾ ದೊಡ್ಡಮನಿ, ಶೃತಿ ಜಾನಿಬ್, ನಿವೇದಿತಾ ಹಾವೇರಿ, ವಿಜಯಲಕ್ಷ್ಮಿ ದಿಗ್ಗಾಂವ, ಸುಲೋಚನಾ ಸೂರ್ಯವಂಶಿ, ಶಿವಲೀಲಾ ಹಿರೇಮಠ, ಜ್ಯೋತಿ ಜಗನ್ನಾಥ, ಸುಜಾತಾ ಶಿಲ್ಪಿ, ಮಲ್ಲಮ್ಮ ಏರಿ, ಜ್ಯೋತಿ ಮುಗುಳೆ, ಸೀಮಾರಾಣಿ ಜಿತುರೆ, ಸಂಗೀತಾ, ರುಕ್ಮಿಣಿ ಜಿತುರೆ, ರೂಪಾ ತುರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT