ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ | ವಿವಿಧೆಡೆ ಧಾರಾಕಾರ ಮಳೆ: ಬೆಳೆಗೆ ಅನುಕೂಲ

Published : 22 ಸೆಪ್ಟೆಂಬರ್ 2024, 16:29 IST
Last Updated : 22 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಅಫಜಲಪುರ: ತಾಲ್ಲೂಕಿನ ವಿವಿಧೆಡೆ ಭಾನುವಾರ ಅಲ್ಲಲ್ಲಿ ಧಾರಾಕಾರ ಮಳೆ ಆಗಿದ್ದು ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ, ಹತ್ತಿ ಮತ್ತು ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಮಳೆ ಅವಶ್ಯಕತೆ ಇತ್ತು. ಮಳೆ ಬಂದಿರುವುದು ಒಳ್ಳೆಯದಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಮಾಶಾಳದ ರೈತರಾದ ಸಂತೋಷ ಗಂಜಿ, ಚಂದ್ರಶೇಖರ್ ಕರ್ಜಿಗಿ ಮತ್ತು ಚಂದ್ರರಾಮ ಬಳಗೊಂಡೆ ಮಳೆ ಬಗ್ಗೆ ಮಾಹಿತಿ ನೀಡಿ, ‘ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಹಳ್ಳ, ಕೊಳ್ಳಗಳು ಮತ್ತು ಕೃಷಿ ಹೊಂಡಗಳು ತುಂಬಿಕೊಂಡಿಲ್ಲ. ಇದರಿಂದ ತೆರೆದಬಾವಿ ಮತ್ತು ಕೊಳವೆ ಬಾವಿಗೆ ನೀರು ಬಂದಿಲ್ಲ’ ಎಂದು ತಿಳಿಸಿದರು.

‘ಹವಾಮಾನ ಇಲಾಖೆ ಪ್ರಕಾರ ಇನ್ನೂ ನಾಲ್ಕು ದಿನ ಮಳೆ ಬರುವ ಸಂಭವವಿದೆ. ಇದರಿಂದ ಮುಂಗಾರು ಬೆಳೆಗೆ ಮತ್ತು ಹಿಂಗಾರು ಬಿತ್ತನೆನೂ ಅನುಕೂಲವಾಗಲಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT