ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದನೂರು: ಹನುಮಾನ ಜಾತ್ರಾ ಮಹೋತ್ಸವ

Published : 1 ಅಕ್ಟೋಬರ್ 2024, 15:43 IST
Last Updated : 1 ಅಕ್ಟೋಬರ್ 2024, 15:43 IST
ಫಾಲೋ ಮಾಡಿ
Comments

ಅಫಜಲಪುರ: ತಾಲ್ಲೂಕಿನ ಸಿದ್ದನೂರು ಗ್ರಾಮದಲ್ಲಿ ಹನುಮಾನ ಜಾತ್ರಾ ಮಹೋತ್ಸವ ನಿಮಿತ್ತ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಸೇವೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಬೆಳಗ್ಗೆ ಹಿಂಚಿಗೇರಿಯ ಶಂಭುಲಿಂಗ ಶಿವಾಚಾರ್ಯರಿಂದ ಹನುಮಾನ ಮೂರ್ತಿಗೆ ಅಭಿಷೇಕ ಜರುಗಿತು. ನಂತರ ಹನುಮಾನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪಲ್ಲಕ್ಕಿಗೆ ನೀರು, ಕಾಯಿ, ಕರ್ಪೂರ ಅರ್ಪಿಸಿ, ದರ್ಶನ ಪಡೆದರು. ಪುರವಂತರ ಕಲಾ ಪ್ರದರ್ಶನ ಗಮನ ಸೆಳೆಯಿತು.

ಮುಖಂಡರಾದ ಶ್ರೀಶೈಲ್ ಹಿರೇಮಠ, ಲತೀಫ ಕಲಬುರಗಿ, ನಾಗಯ್ಯ ಹಿರೇಮಠ, ಶಾಫೀಕ್ ಸೇಡಂ, ಮಲ್ಲಯ್ಯ ಹಿರೇಮಠ, ದತ್ತು ಹೇರೂರ, ಶಿವಕುಮಾರ ಚಿಕ್ಕರೇವೂರ, ಮಲ್ಲು ಸುತಾರ, ಸಿದ್ದಣ್ಣ ಸಗರ, ಮಹಿಬೂಬ್‌ ಸಿದ್ದನೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT