ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದನ್ನು ಸಂಜೆಯೊಳಗೆ ಘೋಷಿಸುವೆ ಎಂದು ಕ್ಷೇತ್ರದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಹೇಳಿದರು.

ಪಟ್ಟಣದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಬೆಂಬಲಿಗರ ಸಭೆಗೂ ಮುಂಚೆ, ಮನೆ ಮುಂದೆ ನೆರೆದಿದ್ದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗುರುವಾರ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಇರುವುದರಿಂದ ಸಂಜೆವರೆಗೆ ಕಾಯುವೆ. ಒಂದು ವೇಳೆ ಸಿಗದಿದ್ದರೆ ನಿಮ್ಮ ಅಭಿಪ್ರಾಯ ಆಧರಿಸಿ ಸ್ವತಂತ್ರವಾಗಿ ಅಥವಾ ಬೇರೆ ಪಕ್ಷದಿಂದ ಕಣಕ್ಕಿಳಿಯಬೇಕೊ ಎಂಬುದನ್ನು ನಿರ್ಧರಿಸುವೆ. ಈ ನಿಮ್ಮ ಬೆಂಬಲವೇ ನನಗೆ ಶಕ್ತಿ ಎಂದರು.

ಕೆಲ ಸ್ಥಳೀಯ ಮುಖಂಡರು ಮಾತನಾಡಿ, ನಮ್ಮ ಯೋಗೇಶ್ವರ್ ಸ್ವತಂತ್ರವಾಗಿ ಅಥವಾ ಯಾವ ಪಕ್ಷದಿಂದ ಸ್ಪರ್ಧಿಸಿದರೂ ನಾವು ಅವರ ಜೊತೆಗಿರುತ್ತೇವೆ. ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡುವುದೇ ನಮ್ಮ ಧ್ಯೇಯ ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಮನೆ ಎದುರು ಜಮಾಯಿಸಿದ್ದ ಬೆಂಬಲಿಗರು "ಮುಂದಿನ ಎಂ.ಎಲ್.ಎ ಯೋಗೇಶ್ವರ್ ಗೆ ಜಯವಾಗಲಿ" ಎಂದು ಘೋಷಣೆಗಳನ್ನು ಕೂಗಿದರು
.ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿ.ಪಿ. ಯೋಗೇಶ್ವರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.