ಹಿಂದೆಯೂ ಪರಾರಿಯಾಗಿದ್ದ ಪತ್ನಿ
ಆರೋಪಿ ಸ್ವೀಟಿ ಕೆಲಸ ಮಾಡುತ್ತಿದ್ದ ಮನೆಗಳ ಬಳಿ ಫ್ರಾನ್ಸಿಸ್ ವಾಕಿಂಗ್ ಮಾಡುತ್ತಿದ್ದ. ಆಗ ಇಬ್ಬರ ನಡುವೆ ಶುರುವಾಗಿದ್ದ ಪರಿಚಯ ಕೆಲ ದಿನಗಳ ಬಳಿಕ ಪ್ರೇಮಕ್ಕೆ ತಿರುಗಿತ್ತು. ಆಕೆಗೆ ಇಬ್ಬರು ಮಕ್ಕಳಿರುವ ಸಂಗತಿ ಫ್ರಾನ್ಸಿಸ್‌ಗೆ ಗೊತ್ತಿದ್ದರೂ ಆಗಾಗ ಭೇಟಿ ಮಾಡುತ್ತಿದ್ದ. ಆರು ತಿಂಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಜುಲೈ ತಿಂಗಳಲ್ಲಿ ಮಕ್ಕಳ ಸಮೇತ ಮನೆ ಬಿಟ್ಟು ಪ್ರಿಯಕರನ ಜೊತೆ ರಾಮನಗರಕ್ಕೆ ಬಂದು ಒಂದೂವರೆ ತಿಂಗಳು ವಾಸವಾಗಿದ್ದಳು. ಕೆಲವು ದಿನಗಳ ಬಳಿಕ ಮನೆಗೆ ಒಬ್ಬಳೇ ವಾಪಸ್ಸಾಗಿದ್ದಳು.