ರಾಮನಗರ: ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಬೈರಮಂಗಲ ರಾಮೇಗೌಡ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗೌತಮ್ ವರ್ಮ ಅವರ ಗಣನೀಯ ಸಾಧನೆ ಪರಿಗಮಿಸಿ ಆಯ್ಕೆ ಮಾಡಲಾಗಿದೆ.

ರಾಮೇಗೌಡ ಅವರು ಕನ್ನಡ ಎಂ.ಎ. ಪಧವೀದರರು. 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಇವರು ಸಾಹಿತಿ, ವಿಮರ್ಶಕ ಮತ್ತು ಕನ್ನಡ ಚಿಂತಕರಾಗಿ ಚಿರಪರಿಚಿತರು. ಸದ್ಯ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಸಸಿದ್ಧಿ (ಕುವೆಂಪು ಕಾವ್ಯ ವಿಮರ್ಶೆ), ರಸಗ್ರಹಣ (ಕೃತಿ ವಿಮರ್ಶೆ), ರಸಾನುಭೂಮಿ (ವಿಚಾರ ವಿಮರ್ಶೆ), ರಸಲಹರಿ, ರಸಾಯನ (ಸಾಹಿತ್ಯ ವಿಮರ್ಶೆ), ಶ್ರೀರಾಮಾಯಣ ದರ್ಶನಂ-ಮೂರು ನೋಟಗಳು (ವಿಮರ್ಶೆ), ಸಿಂಧೂರಿ (ಕಥಾ ಸಂಕಲನ), ಮಾಯಾ ಕಿನ್ನರಿ (ಕಾದಂಬರಿ), ಕೆಂಗಲ್ ಹನುಮಂತಯ್ಯ, ಹಡಪದ ಅಪ್ಪಣ್ಣ (ವ್ಯಕ್ತಿಚಿತ್ರ), ಈ ಪರಿಯ ಸೊಬಗು (ಜನಪದ ಗೀತೆಗಳು), ಜಾನಪದ ದರ್ಶನ (ಜಾನಪದ ಪರಿಚಯ ಗ್ರಂಥ), ಜಗತ್ತಿನ ಜನಪದ ಕಥೆಗಳು (ಅನುವಾದ) ಕೃತಿಗನ್ನು ರಚಿಸಿದ್ದಾರೆ.

2011ರಲ್ಲಿ ರಾಮನಗರದಲ್ಲಿ ನಡೆದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷರಾಗಿದ್ದರು. ಹತ್ತು ಹಲವು ಸಂಘಟನೆಗಳು ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ

ಗೌತಮ್ ವರ್ಮ: ಕೇವಲ 42 ಸೆಕೆಂಡುಗಳಲ್ಲಿ ಮೂರು ತೆಂಗಿನಕಾಯಿಗಳನ್ನು ಹಲ್ಲಿನಲ್ಲಿ ಸುಲಿದು ಗಿನ್ನೀಸ್ ದಾಖಲೆ ನಿರ್ಮಿಸಿದ್ದಾರೆ. ಕಿವಿಯಿಂದ ಮಾರುತಿ ಕಾರನ್ನು ಎಳೆದು ಲಿಮ್ಕಾ ದಾಖಲೆಗೆ ಸೇರಿದ ಕೀರ್ತಿ ಇವರದ್ದು. 38 ನಿಮಿಷಗಳಲ್ಲಿ 51 ತೆಂಗಿನ ಕಾಯಿಗಳನ್ನು ಹಲ್ಲಿನಲ್ಲಿ ಸುಲಿದಿದ್ದಾರೆ. 300 ಸ್ಟ್ರಾಗಳನ್ನು ಒಂದೇ ಬಾರಿಗೆ ಬಾಯಿಯಲ್ಲಿ 5 ನಿಮಿಷಗಳ ಕಾಲ ಇಟ್ಟುಕೊಳ್ಳುವ, ಬೈಸಿಕಲ್ ಅನ್ನು ಹಲ್ಲಿನಲ್ಲಿ ಕಚ್ಚಿ ಹಿಡಿದು 40 ಅಡಿ ಎತ್ತರದ ತೆಂಗಿನ ಮರ ಏರಿದ್ದಾರೆ. 80 ಕೆ.ಜಿ ಅಕ್ಕಿ ಮೂಟೆಯನ್ನು ಹಲ್ಲಿನಲ್ಲಿ ಎತ್ತಿದ್ದು ವಿಶ್ವದಾಖಲೆ ಮಾಡಿದ್ದಾರೆ.

ರಾಜ್ಯ ಮಟ್ಟದ ಕುಸ್ತಿ ಪಟುವಾಗಿ, ಜೂಡೋ ಪಟುವಾಗಿಯೂ ಗೌತಮ್ ವರ್ಮ ಗುರುತಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಬಾಬಾ ಸಾಹೇಬ್ ಡಾ. .ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಮತ್ತು ಬಿಬಿಎಂಪಿ ಪ್ರದಾನ ಮಾಡುವ ಕೆಂಪೇಗೌಡ ಪ್ರಶಸ್ತಿ ಸೇರಿ 69 ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.