ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಬೆಲೆ ಜಲಾಶಯದಿಂದ ನೀರು ಬಿಡುಗಡೆ: ಜನರಿಗೆ ಎಚ್ಚರಿಕೆ

Published : 7 ಅಕ್ಟೋಬರ್ 2024, 5:15 IST
Last Updated : 7 ಅಕ್ಟೋಬರ್ 2024, 5:15 IST
ಫಾಲೋ ಮಾಡಿ
Comments

ಕನಕಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅರ್ಕಾವತಿ ಹಾರೋಬೆಲೆ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ನೀರು ಹರಿಸಲಾಗುವುದು. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಕಪುರ ಮಾರ್ಗವಾಗಿ ಹರಿದು ಹೋಗುವ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಾರೋಬೆಲೆ ಜಲಾಶಯ ಭರ್ತಿಯಾಗಿರುವುದರಿಂದ ಯಾವುದೇ ಕ್ಷಣದಲ್ಲಾದರೂ ನೀರು ಹೊರಬಿಡುವುದರಿಂದ ನದಿ ಪಾತ್ರದ ಜನರಿಗೆ ತೊಂದರೆ ಆಗದಂತೆ ಈ ಎಚ್ಚರಿಕೆ ನೀಡಲಾಗಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ಇರುವ ರೈತರು, ನದಿ ದಡಕ್ಕೆ ಹೋಗಬಾರದು. ಜನ-ಜಾನುವಾರು ನದಿ ಹತ್ತಿರಕ್ಕೆ ತರಬಾರದು. ಯಾವುದೇ ಕ್ಷಣದಲ್ಲಿ ಎಲ್ಲ ಗೇಟ್‌ ತೆರೆದು ನೀರು ಒಮ್ಮೆಲೆ ಹೊರಬಿಡಲಾಗುವುದು.

ಒಳಹರಿವಿನ ಪ್ರಮಾಣದ ತಕ್ಕಂತೆ ಹೊರ ಹರಿವಿನ ಪ್ರಮಾಣ ಹೆಚ್ಚಾಗಲಿದೆ. ನದಿ ಪಾತ್ರದ ಜನರಿಗೆ ಸಮಸ್ಯೆ ಉಂಟಾಗಲಿದೆ. ಮುಂಜಾಗ್ರತ ಕ್ರಮವಾಗಿ ಸ್ಥಳಾಂತರವಾಗುವಂತೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ರಾತ್ರಿ ವೇಳೆಯಲ್ಲೂ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇದೆ.

ಹಾರೋಬೆಲೆ ಬಳಿ ಅರ್ಕಾವತಿ ನದಿಗೆ ನಿರ್ಮಿಸಿರುವ ಹಾರೋಬೆಲೆ ಜಲಾಶಯ
ಹಾರೋಬೆಲೆ ಬಳಿ ಅರ್ಕಾವತಿ ನದಿಗೆ ನಿರ್ಮಿಸಿರುವ ಹಾರೋಬೆಲೆ ಜಲಾಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT