ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ನಾಚಿಕೆಯಾಗಬೇಕು' - ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ನೆತನ್ಯಾಹು ತಿರುಗೇಟು

Published : 6 ಅಕ್ಟೋಬರ್ 2024, 2:56 IST
Last Updated : 6 ಅಕ್ಟೋಬರ್ 2024, 2:56 IST
ಫಾಲೋ ಮಾಡಿ
Comments

ಜೆರುಸಲೇಂ: ಗಾಜಾ ಹಾಗೂ ಲೆಬನಾನ್ ಮೇಲಿನ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

'ಇರಾನ್ ನೇತೃತ್ವದ ಕ್ರೂರ ಶಕ್ತಿಗಳ ವಿರುದ್ಧ ಇಸ್ರೇಲ್ ಹೋರಾಡುತ್ತಿರುವಾಗ, ಎಲ್ಲ ನಾಗರಿಕ ದೇಶಗಳು ಇಸ್ರೇಲ್ ಪರವಾಗಿ ದೃಢವಾಗಿ ನಿಲ್ಲಬೇಕು' ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

'ಆದರೂ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರೆ ಪಾಶ್ಚಿಮಾತ್ಯ ನಾಯಕರು ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಗಳಿಗೆ ಕರೆ ನೀಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು' ಎಂದು ತಿರುಗೇಟು ನೀಡಿದ್ದಾರೆ.

'ಇರಾನ್ ಬೆಂಬಲಿತ ಉಗ್ರ ಸಂಘಟನೆಗಳ ವಿರುದ್ಧ ಇಸ್ರೇಲ್ ಹಲವಾರು ಪ್ರದೇಶಗಳಲ್ಲಿ ಸಂಘರ್ಷ ಮಾಡುತ್ತಿದೆ' ಎಂದು ಅವರು ಹೇಳಿದ್ದಾರೆ.

ಬಳಿಕ ನೆತನ್ಯಾಹು ಹೇಳಿಕೆಗೆ ಫ್ರಾನ್ಸ್‌ನ ಕಚೇರಿ ಪ್ರತಿಕ್ರಿಯೆ ನೀಡಿದೆ. 'ಇಸ್ರೇಲ್‌ನ ಸ್ಥಿರ ಸ್ನೇಹಿತ' ಫ್ರಾನ್ಸ್ ಎಂದು ಹೇಳಿದೆ. ಆದರೆ ನೆತನ್ಯಾಹು ಅವರ ಹೇಳಿಕೆ ಎಲ್ಲೆ ಮೀರಿದೆ ಎಂದು ಹೇಳಿದೆ.

ಏತನ್ಮಧ್ಯೆ ಮ್ಯಾಕ್ರನ್ ಹೇಳಿಕೆಯನ್ನು ಕತಾರ್ ಹಾಗೂ ಜಾರ್ಡನ್ ದೇಶಗಳು ಸ್ವಾಗತಿಸಿವೆ.

ಈ ಮೊದಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಂದರ್ಶನದಲ್ಲಿ 'ಲೆಬನಾನ್ ಹೊಸ ಗಾಜಾ ಆಗಬಾರದು. ಲೆಬನಾನಿನಲ್ಲಿ ಸಂಘರ್ಷ ತಪ್ಪಿಸಲು ಆದ್ಯತೆ ನೀಡಬೇಕು' ಎಂದು ಹೇಳಿದ್ದರು.

ಗಾಜಾದಲ್ಲಿ ಸಂಘರ್ಷವನ್ನು ತಡೆಯಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆಯೂ ಮ್ಯಾಕ್ರನ್ ಕರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT