ಬೆಂಗಳೂರು: ವರನಟ ರಾಜ್ಕುಮಾರ್, ವಿಷ್ಣುವರ್ಧನ್, ಅನಂತನಾಗ್ ಅವರೊಂದಿಗೆ ತೆರೆಹಂಚಿಕೊಂಡಿದ್ದ ಹಿರಿಯ ನಟ ಟಿ.ತಿಮ್ಮಯ್ಯ(92) ಶನಿವಾರ ನಿಧನರಾದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ.

ತಿಮ್ಮಯ್ಯ ಅವರು ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಿಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಮತ್ತು ಅನೇಕರೊಂದಿಗೆ ಕೆಲಸ ಮಾಡಿದ್ದಾರೆ.

‘ಚಲಿಸುವ ಮೋಡಗಳು’, ‘ಪ್ರತಿಧ್ವನಿ’, ‘ಬಂಧನ’, ‘ಬೆಂಕಿಯ ಬಾಲೆ’, ‘ಕಾಮನ ಬಿಲ್ಲು’, ‘ಪರಮೇಶಿ ಪ್ರೇಮ ಪ್ರಸಂಗ’, ‘ಜ್ವಾಲಾಮುಖಿ’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಕರ್ಣ’, ‘ಈ ಜೀವ ನಿನಗಾಗಿ’, ‘ಕುರುಕ್ಷೇತ್ರ’, ‘ನಿಶ್ಕರ್ಷ’, ‘ಬೆಳದಿಂಗಳ ಬಾಲೆ’ ಚಿತ್ರಗಳಲ್ಲಿ ನಟಿಸಿದ್ದರು.

ಬನಶಂಕರಿ ಚಿತಾಗಾರದಲ್ಲಿ ಭಾನುವಾರ (ನ.17) ಮಧ್ಯಾಹ್ನ 12 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.