ಬೈಂದೂರು: ಬೈಂದೂರು ಉತ್ಸವದ ಮೂಲಕ ಸಮಾಜವನ್ನು ಜೋಡಿಸುವ ಕ್ರಾಂತಿಕಾರಿ ಕೆಲಸ ಮಾಡಿರುವ ಶಾಸಕ ಗುರುರಾಜ್ ಗಂಟಿಹೊಳೆಯವರ ಕಾರ್ಯ ಪ್ರಸಂಶನೀಯ. ಉತ್ಸವವು ಸಮೃದ್ಧ ಬೈಂದೂರನ್ನು ಸೃಷ್ಟಿ ಮಾಡಲು ಬೇಕಾಗಿರುವ ತಳಪಾಯದ ಕಲ್ಲಾಗಿದ್ದು, ಶಿಲನ್ಯಾಸ ನೇರವೇರಿಸಿದಂತಾಗಿದೆ. ಉತ್ಸವ ನಿರಂತರವಾಗಿ ನಡೆಯುತ್ತಿರಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾರೈಸಿದರು.

ಅವರು ಭಾನುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ, ತಾಲ್ಲೂಕು ಆಡಳಿತದ ಸಹಭಾಗಿತ್ವದಲ್ಲಿ ನಡೆದ ‘ಬೈಂದೂರು ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು, ಇದು ಕೇವಲ ಹಬ್ಬವಲ್ಲ, ಜನಸಾಗರ. ಇದರ ಕಲ್ಪನೆ ಶ್ಲಾಘನೀಯವಾಗಿದ್ದು, ಇವೆಲ್ಲವನ್ನೂ ವೀಕ್ಷಿಸಿದಾಗ ಬೈಂದೂರು ಮುಂದೆ ದೊಡ್ಡ ಮಟ್ಟದ ಬದಲಾವಣೆ ಹೊಂದುವುದರಲ್ಲಿ ಎರಡು ಮಾತಿಲ್ಲ. ನನ್ನ ಸಿನಿಮಾ ಕ್ಷೇತ್ರದ ಪಯಣದಲ್ಲಿ ಈ ಕ್ಷೇತ್ರದ ಜನರ ಕೊಡುಗೆ ಅನನ್ಯ ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಶಾಸಕ ಹರೀಶ ಪೂಂಜ, ಎಂ.ಎಸ್. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕರ್ನಾಟಕ ರಕ್ಷಣಾ ವೇದಿಕೆಯ ಶಿವಾನಂದ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಹಟ್ಟಿಯಂಗಡಿ ದೇವಳದ ಆಡಳಿತ ಮೊಕ್ತಸರ ಬಾಲಚಂದ್ರ ಭಟ್, ಉದ್ಯಮಿ ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್, ಗೋಕುಲ ಶೆಟ್ಟಿ ಉಪ್ಪುಂದ, ಶಿರೂರು ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಸಾಧನ್ದಾಸ್, ಗಣೇಶ ಗಂಗೊಳ್ಳಿ, ಉದ್ಯಮಿ ಗೋಪಾಲಕೃಷ್ಣ ಕಾಮತ್, ವಲಯ ಅರಣ್ಯಾಧಿಕಾರಿ ಸಂದೇಶ, ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಕುಮಾರ್, ರಾಮಚಂದ್ರ ಶಿರೂರಕರ್, ಗೌರಿ ದೇವಾಡಿಗ, ಸತೀಶ ಕೊಠಾರಿ, ಸದಾನಂದ ಉಪ್ಪಿನಕುದ್ರು, ಉಮೇಶ ಶೆಟ್ಟಿ ಕಲ್ಗದ್ದೆ, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಉಪ್ಪುಂದ ಇದ್ದರು. ರಮ್ಯಾ ರವಿ ಪ್ರಾರ್ಥಿಸಿದರು. ಬಿ.ಎಸ್. ಸುರೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರಿಕಟ್ಟೆ ಪ್ರದೀಪ ಶೆಟ್ಟಿ ವಂದಿಸಿದರು. ಆರ್.ಜೆ ಪ್ರಸನ್ನ ನಿರ್ವಹಿಸಿದರು. ಸುರಭಿ ಮ್ಯೂಸಿಕ್ಸ್ ಮಂಗಳೂರು ತಂಡದಿಂದ ಲೈವ್ ಸಂಗೀತ ಹಬ್ಬ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.