ಬ್ರಹ್ಮಾವರ: ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್ ಮತ್ತು ಅವರ ಬೆಂಬಲಿಗರನ್ನು ಮಂಗಳವಾರ ಭೇಟಿಯಾಗಿ ಚುನಾವಣೆ ಮುಗಿದ ನಂತರ ಅವಕಾಶ ನೀಡುವ ಭರವಸೆ ನೀಡಿದರು.

ಯಾವುದೇ ನಿಗಮದ ಅಧ್ಯಕ್ಷ ಹುದ್ದೆ ಸಿಗದಿದ್ದ ಕಾರಣ ಅಸಮಾಧಾನಗೊಂಡಿದ್ದ ಶಂಕರ ಎ. ಕುಂದರ್ ಅವರಿಗೆ ಕಾರ್ಯಕರ್ತರ ಸಭೆ ನಡೆಸಿ, ಸಾಮೂಹಿಕ ರಾಜೀನಾಮೆ ಕೊಡುವುದಾಗಿ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆಯಂತೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಅವರ ಮಾರ್ಗದರ್ಶನದಲ್ಲಿ ಅವರನ್ನು ಭೇಟಿ ಮಾಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದಲ್ಲಿ ಕಾರ್ಯಕರ್ತರೊಂದಿಗೆ ಪ್ರಾಮಾಣಿಕವಾಗಿ ದುಡಿದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮವಹಿಸುವುದಾಗಿ ಶಂಕರ ಕುಂದರ್ ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ನರಸಿಂಹಮೂರ್ತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ಶಂಕರ ಬಂಗೇರ ಕೋಡಿ ಕನ್ಯಾನ, ಬಸವ ಪೂಜಾರಿ ಗುಂಡ್ಮಿ, ಎಂ. ಎಸ್. ಸಂಜೀವ, ಶ್ರೀನಿವಾಸ ಅಮೀನ್, ರವೀಂದ್ರ ಕಾಮತ್ ಗುಂಡ್ಮಿ, ದಿನೇಶ ಬಂಗೇರ ಗುಂಡ್ಮಿ, ಬಾರ್ಕೂರು ರಮಾನಂದ ಶೆಟ್ಟಿ, ಗಣೇಶ ಕೆ ನೆಲ್ಲಿಬೆಟ್ಟು, ಶ್ರೀನಿವಾಸ ವಡ್ಡರ್ಸೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.