ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ನೇಹಿ ಅಧಿಕಾರಿಗಳನ್ನು ಜನ ಗುರುತಿಸುತ್ತಾರೆ: ಅರುಣಕುಮಾರ ಎಸ್.ವಿ

ಅರುಣಕುಮಾರ ಎಸ್.ವಿ ಅವರಿಗೆ ಅಭಿನಂದನೆ
Published 1 ಜುಲೈ 2024, 5:44 IST
Last Updated 1 ಜುಲೈ 2024, 5:44 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕುಂದಾಪುರ: ಮಾಡುವ ಕೆಲಸದಲ್ಲಿ ಆಸಕ್ತಿ ಇಟ್ಟು, ತನ್ನ ಬಳಿ ಸಮಸ್ಯೆ ಹೊತ್ತು ಬರುವ ಜನರಿಗೆ ಸ್ಪಂದಿಸುವ ಸರ್ಕಾರಿ ಅಧಿಕಾರಿಗಳನ್ನು ಜನ ಯಾವತ್ತೂ ಗುರುತಿಸುತ್ತಾರೆ ಎಂದು ರಾಜ್ಯ ಸಹಕಾರ ಮಹಾಮಂಡಳ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್‌ ಹೇಳಿದರು.

ಇಲ್ಲಿಗೆ ಸಮೀಪದ ಅಂಕದಕಟ್ಟೆಯ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅರುಣ್ ಕುಮಾರ್ ಎಸ್.ವಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯ ಬಹುತೇಕ ಸಹಕಾರಿ ಸಂಸ್ಥೆಗಳು ಇಂದು ಯಶಸ್ಸಿನ ಪಥದಲ್ಲಿ ಮುನ್ನೆಡೆಯುವಲ್ಲಿ ಅರುಣ್ ಕುಮಾರ್ ಅವರ ಸೇವೆ ಇದೆ. ಅಧಿಕಾರಿಯೊಬ್ಬರು ಇನ್ನೂ ಇರಬೇಕು ಎನ್ನುವ ಭಾವನೆ ಇರುವಾಗಲೇ ನಿವೃತ್ತಿಯಾಗುವುದರಲ್ಲಿಯೂ ಸಂತೃಪ್ತಿ ಇದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಕುಮಾರ್ ಎಸ್.ವಿ ಅವರು, ಸರ್ಕಾರಿ ನೌಕರನಾಗಿ ಮಾಡಿರುವ ಸೇವೆಯ ಬಗ್ಗೆ ತೃಪ್ತಿ ಇದೆ. ಸಹಕಾರ ಸಂಘಗಳ ವಿವಿಧ ನಿಧಿಗಳ ಸದುಪಯೋಗದಿಂದ ಕೃಷಿಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಯ ಜೊತೆಗೆ ಸ್ವಂತ ಕಟ್ಟಡ ರಚನೆ ಮಾಡಲು ಸಹಾಯವಾಯಿತು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ , ಟಿಎಪಿಸಿಎಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ರವಿರಾಜ ಹೆಗ್ಡೆ, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್  ಇದ್ದರು.

ಅರುಣ್ ಕುಮಾರ್ ಎಸ್.ವಿ ಹಾಗೂ ಜಯಲಕ್ಷ್ಮಿ ಎಂ.ವಿ ಅವರನ್ನು ಬಂಗಾರದ ಹಾರ, ಸ್ಮರಣಿಕೆ, ಸನ್ಮಾನಪತ್ರ ನೀಡಿ ಸನ್ಮಾನಿಸಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ರಾಜೇಂದ್ರ ಕುಮಾರ್ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಬೈಂದೂರು ಸ್ವಾಗತಿಸಿದರು. ಗಾಯತ್ರಿ ಪ್ರಕಾಶ್ ಐತಾಳ್ ಪ್ರಾರ್ಥಿಸಿದರು. ವಿಶ್ವೇಶ್ವರ ಐತಾಳ್ ಪಟ್ಟಿ ವಾಚಿಸಿದರು. ಉದಯ ಕುಮಾರ ಹಟ್ಟಿಯಂಗಡಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಯುವ ಭಾಗವತೆ ಶ್ರೀರಕ್ಷಾ ಹೆಗಡೆ ಮತ್ತು ಬಳಗದವರಿಂದ ಯಕ್ಷನಾಟ್ಯದ ಕಾರ್ಯಕ್ರಮ ನಡೆಯಿತು.

ಸಹಕಾರ ಇಲಾಖೆಯಲ್ಲಿ ದಕ್ಷತೆ ಪ್ರಾಮಾಣಿಕತೆ ಮೂಲಕ ಸೇವೆ ಸಲ್ಲಿಸಿದ ಅರುಣ್ ಕುಮಾರ್ ಅವರ ಸೇವೆ ಈ ಭಾಗದ ಸಹಕಾರಿ ಕ್ಷೇತ್ರ ಯಾವಾಗಲೂ ಸ್ಮರಿಸಿಕೊಳ್ಳುತ್ತದೆ.
ಎ.ಕಿರಣ್ ಕುಮಾರ್ ಕೊಡ್ಗಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT