ಉಡುಪಿ: ಮಣಿಪಾಲ ವಿಶ್ವವಿದ್ಯಾಲ ಯದ ವಾಸ್ತುಶಿಲ್ಪಾ ವಿಭಾಗದ ವಿದ್ಯಾ ರ್ಥಿನಿ ವಿಷ್ಣುಪ್ರಿಯ ವಿಶ್ವನಾಥನ್ ಅವರು ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ವಾಸ್ತುಶಿಲ್ಪ ವಿಭಾಗ ಆಯೋಜಿಸಿದ್ದ 18ನೇ ಬರ್ಕೆಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ‘ಪೇವಿಂಗ್ ಬೆಟರ್ ಪಾತ್ಸ್ ಫಾರ್ ಲಿಟಲ್ ಫೀಟ್ಸ್’ ಶೀರ್ಷಿಕೆಯ ಸುಮಾರು 2,500 ಪದಗಳ ಪ್ರಬಂಧವನ್ನು ವಿಷ್ಣು ಪ್ರಿಯ ಬರೆದಿದ್ದರು. ಬಹುಮಾನ 6 ಸಾವಿರ ಡಾಲರ್ (₹4.20 ಲಕ್ಷ) ನಗದು ಬಹುಮಾನ ಇದು ಒಳಗೊಂಡಿದೆ.

‘ವಸತಿರಹಿತರಿಗೆ ವಸತಿ ಒದಗಿಸುವ ಸವಾಲು’ ಪ್ರಬಂಧ ಸ್ಪರ್ಧೆಯ ಮುಖ್ಯ ವಿಷಯವಾಗಿತ್ತು. ಸಮುದಾಯದವರ ವಸತಿ ಸಮಸ್ಯೆಯ ಸವಾಲು ಎದುರಿಸಲು ಕೈಗೊಂಡಿರುವ ಕ್ರಮಗಳು ಹಾಗೂ ವಸತಿ ರಹಿತರಿಗೆ ವಸತಿ ನೀಡಲು ನಿಮ್ಮ ಸಹಕಾರ ಎಂಬ ಎರಡು ಉಪ ವಿಷಯ ಗಳನ್ನು ಮುಖ್ಯ ವಿಷಯ ಒಳಗೊಂಡಿತ್ತು.

‘ಫಲಿತಾಂಶ ಆಶ್ಚರ್ಯ ಉಂಟು ಮಾಡಿದೆ. ಪ್ರಬಂಧ ಬರವಣಿಗೆಯಲ್ಲಿ ಆಸಕ್ತಿ ಇರುವ ನನಗೆ ಈ ಬಹುಮಾನ ಹುಮ್ಮಸ್ಸು ನೀಡಿದೆ. ಪತ್ರಕರ್ತೆಯಾಗುವ ಗುರಿ ಇದ್ದು, ವಾಸ್ತುಶಿಲ್ಪ ನನ್ನ ಆಸಕ್ತಿಯ ವಿಷಯವಾಗಿದೆ. ಅದೇ ಕಾರಣಕ್ಕೆ ನಾನು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಎಷ್ಟು ಉತ್ತಮವಾಗಿ ಬರೆಯಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಸಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇನ್ನೊಂದು ಕಾರಣ’ ಎಂದು ವಿಷ್ಣುಪ್ರಿಯ ತಿಳಿಸಿದ್ದಾರೆ.

‘ನಮ್ಮ ವಿಭಾಗದ ಅತ್ಯುತ್ತಮ ವಿದ್ಯಾ ರ್ಥಿಗಳಲ್ಲಿ ವಿಷ್ಣುಪ್ರಿಯ ಅವರೂ ಒಬ್ಬರು. ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸುವ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿ ಸಾಧನೆ ಮಾಡಿರು ವುದು ಸಂತಸ ತಂದಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ಅವರು ಅಧ್ಯಯನ ಮಾಡುತ್ತಿದ್ದರು. ನಮ್ಮ ವಿಭಾ ಗಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅವರು ಗೌರವ ತಂದಿದ್ದಾರೆ’ ಎಂದು ವಾಸ್ತುಶಿಲ್ಪಾ ವಿಭಾಗದ ನಿರ್ದೇಶಕ ಪ್ರೊ. ನಿಶಾಂತ್ ಮಣಪುರೆ ತಿಳಿಸಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿನೋದ್ ಆಂತೋನಿ ಥಾಮಸ್ ಅವರು ಅವರು ವಿನ್ಯಾಸ ಗೊಳಿಸಿದ್ದ ನೀರು ಬಳಕೆ ರಹಿತ, ದುರ್ವಾ ಸನೆ ಮುಕ್ತ ಶೌಚಾಲಯವು ಅಖಿಲ ಭಾರತ ಮಟ್ಟದ ಶೌಚಾಲಯ ವಿನ್ಯಾಸ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆ ದಿದ್ದನ್ನು ಸ್ಮರಿಸಬಹುದು. ರೈಲ್ವೆ ಇಲಾಖೆ ಯು ಲಖನೌದ ಸಂಶೋಧನೆ ವಿನ್ಯಾಸ ಹಾಗೂ ಮಾನಕ ಸಂಸ್ಥೆ (ರೀಸರ್ಚ್ ಡಿಸೈನ್ ಅಂಡ್ ಸ್ಟಾಂಡರ್ಡ್) ಮೂಲಕ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.