ಕಾರವಾರ:ಸಸ್ಯಾಹಾರಿಗಳ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿರುವ ಬೀನ್ಸ್ ದರ ಈ ವಾರಸ್ವಲ್ಪ ಇಳಿಮುಖವಾಗಿದೆ. ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಪ್ರತಿ ಕೆ.ಜಿ. ₹ 120ರಂತೆ ಮಾರಾಟವಾಗಿದೆ. ಮಾರುಕಟ್ಟೆಗೆ ಬೀನ್ಸ್ ಸ್ವಲ್ಪಮಟ್ಟಿಗೆ ಪೂರೈಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.

ಕಳೆದ ವಾರ ಬೀನ್ಸ್ ದರ ಕೆ.ಜಿ.ಗೆ ₹ 150ರವರೆಗೂ ತಲುಪಿತ್ತು. ಈ ವಾರ ದರ ಕಡಿಮೆಯಾದರೂ ಹಲವರಿಗೆ ಕೈಗೆಟುಕದ ಎತ್ತರದಲ್ಲೇ ಇದೆ. ಹಾಗಾಗಿ ಖರೀದಿಗೆ ಹಿಂದೇಟು ಹಾಕುವುದು, ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದುದು ಹಾಗೂ ವರ್ತಕರೊಂದಿಗೆ ಹೆಚ್ಚು ಚೌಕಾಸಿ ಮಾಡುತ್ತಿದ್ದುದುಸಾಮಾನ್ಯವಾಗಿತ್ತು.

ಈ ವಾರ ಹಸಿಮೆಣಸಿನ ದರ ಗಗನಮುಖಿಯಾಗಿದೆ. ಪ್ರತಿ ಕೆ.ಜಿ.ಗೆ ₹ 75ರಿಂದ ₹ 80ರ ಆಸುಪಾಸಿಗೆ ತಲುಪಿದೆ. ಇದು ಗ್ರಾಹಕರ ಜೇಬನ್ನು ಸುಡುತ್ತಿದೆ. ಕಳೆದ ವಾರಗರಿಷ್ಠ₹ 70ರಂತೆ ಮಾರಾಟವಾಗಿತ್ತು.

‘ಹಸಿಮೆಣಸು ಅಡುಗೆಯ ಅವಿಭಾಜ್ಯ ಅಂಗವಾಗಿದೆ. ಅದಿಲ್ಲದೇ ನಿತ್ಯದ ಊಟವನ್ನು ಊಹಿಸುವುದೂ ಸಾಧ್ಯವಿಲ್ಲ. ದರ ಏರಿಕೆಯಿಂದ ಖಾರ ಹೆಚ್ಚಿದಂತೆ ಭಾಸವಾಗುತ್ತದೆ. ಆದರೆ, ಅಡುಗೆಗೆ ಅತ್ಯಗತ್ಯವಾದ ಕಾರಣ ಬೈದುಕೊಂಡಾದರೂ ಖರೀದಿಸುತ್ತಿದ್ದೇನೆ’ ಎಂದು ಗ್ರಾಹಕಿ ರಮಾ ಮುಗುಳ್ನಕ್ಕರು.

ಉಳಿದಂತೆ ಹಣ್ಣಿನ ಮಾರುಕಟ್ಟೆಯಲ್ಲೂ ದರ ಏರಿಕೆಯಾಗಿದೆ. ತಲಾ ಒಂದು ಕೆ.ಜಿ ತಾಜಾ ಸೇಬು ₹180,ಮೂಸಂಬಿ ₹ 80,ಪಪ್ಪಾಯ ₹ 30,ದ್ರಾಕ್ಷಿ (ಬಿಳಿ) ₹ 100,ಅನಾನಸ್ ₹ 30,ದಾಳಿಂಬೆ ₹ 100,ಕಲ್ಲಂಗಡಿ ₹ 20ರಂತೆ ಬಿಕರಿಯಾದವು.

ಈಗ ಮಾವಿನಹಣ್ಣಿನ ಋತು ಆರಂಭವಾಗಿದ್ದು, ಕಾರವಾರದ ಬೀದಿಗಳಲ್ಲಿ ಅಲ್ಲಲ್ಲಿ ವ್ಯಾಪಾರಿಗಳು ರಾಶಿ ಇಟ್ಟುಕೊಂಡಿದ್ದಾರೆ. ಪ್ರತಿ ಡಜನ್ನಂತೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಪ್ರಸಿದ್ಧ ತಳಿಕರಿ ಇಶಾಡ್ ₹ 400,ಮುಸ್ರಾತ್ ₹ 600,ಅಲ್ಫಾನ್ಸೊ ₹ 500ರಂತೆ ದರ ನಿಗದಿಯಾಗಿವೆ. ದರ ಹೆಚ್ಚಿರುವ ಕಾರಣ ಗ್ರಾಹಕರು ಇನ್ನೊಂದು ವಾರ ಹೋದ ಬಳಿಕ ಖರೀದಿಸಿದರೆ ಸಾಕು ಎಂದು ಮನಸ್ಸು ಬದಲಿಸುತ್ತಿದ್ದಾರೆ.

ತರಕಾರಿ: ದರ (ಕೆ.ಜಿ.ಗೆ, ₹ಗಳಲ್ಲಿ)
ಟೊಮೆಟೊ: 30
ಈರುಳ್ಳಿ: 20
ಆಲೂಗಡ್ಡೆ: 25
ಮೆಣಸು: 75
ಬೀಟ್ರೂಟ್: 40
ಕ್ಯಾರೇಟ್: 60
ಹೂಕೋಸು: 45
ಬದನೆಕಾಯಿ: 59
ತೊಂಡೆಕಾಯಿ: 40
ಹಾಗಲಕಾಯಿ: 80
ಕ್ಯಾಬೇಜ್: 25
ಚೌಳಿಕೋಡು: 50
ನವಿಲಕೋಸು: 59
ಬೀನ್ಸ್: 120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.