ಗೋಕರ್ಣ: ಇಲ್ಲಿಯ ಪ್ಯಾರಡೈಸ್ ಕಡಲತೀರದಲ್ಲಿ ಮಂಗಳವಾರ ಈಜಲು ಸಮುದ್ರಕ್ಕೆ ಇಳಿದ ಇಬ್ಬರಲ್ಲಿ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮತ್ತೊಬರನ್ನು ರಕ್ಷಿಸಲಾಗಿದೆ.

ಮೃತರನ್ನು ಬೆಂಗಳೂರಿನ ಅದ್ವೈತ್ ದೀಬಬ್ ಜೈನ್ (20) ಎಂದು ಗುರುತಿಸಲಾಗಿದೆ. ಮುಂಬೈಯ ಕೆ.ಶಿಮೊನೆ ಬರ್ಡೆ (23) ಎಂಬುವವರನ್ನು ನೀರಿನಿಂದ ಮೇಲೆಳೆದು ತರಲಾಗಿದೆ. ಮುಂಬೈಯಿಂದ ನಾಲ್ವರು ಹಾಗೂ ಬೆಂಗಳೂರಿನಿಂದ ಅದ್ವೈತ್ ನಾಲ್ಕು ದಿನಗಳ ಹಿಂದೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಐವರು ಮಂಗಳವಾರ ಸಂಜೆ ಕಡಲತೀರಕ್ಕೆ ಹೋಗಿದ್ದಾಗ ಅವಘಡ ನಡೆದಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಹೋದ ಕರಾವಳಿ ಕಾವಲು ಪಡೆ, ಗೋಕರ್ಣ ಪೊಲೀಸರು ಹಾಗೂ ಆಂಬುಲೆನ್ಸ್‌ನವರು ನೀರಿನಿಂದ ಇಬ್ಬರನ್ನೂ ಮೇಲೆತ್ತಿದರು. ಒಬ್ಬರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ಷಣೆಗೆ ನೆರವಾದರು.

ಪ್ಯಾರಡೈಸ್ ಕಡಲತೀರವು ದುರ್ಗಮ ಪ್ರದೇಶವಾಗಿದ್ದು, ಏನಾದರೂ ಅವಘಡ ಸಂಭವಿದರೆ ನಾಲ್ಕು ಕಿಲೋಮೀಟರ್ ನಡೆದೇ ಸಾಗಬೇಕಾಗಿದೆ. ಇಂತಹ ಸಂದರ್ಭದಲ್ಲೂ ಒಬ್ಬರನ್ನು ರಕ್ಷಿಸಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.