ಕಾರವಾರ: ‘ತಾಳ್ಮೆಯು ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತು. ತಾಳ್ಮೆ ಎಂಬ ಮಹಾ ಸಂಪತ್ತು ನಮ್ಮೆಲ್ಲರ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿ ಬರಲಿ. ಈ ಮೂಲಕ ಜೀವನ ಸುಖಮಯವಾಗಲಿ’ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ 11ನೇ ದಿನವಾದ ಶನಿವಾರ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಬೆಳಿಗ್ಗೆ ಕಾಳು ಬಿತ್ತಿ ಸಂಜೆಗೆ ಪೈರು ಬರಲು ಸಾಧ್ಯವೇ? ಹೀಗೆ ಜೀವನದಲ್ಲೂ ತಾಳ್ಮೆ ಅತ್ಯಂತ ಮಹತ್ವ. ಜೀವನದಲ್ಲೂ ನಾವು ಅವಸರ ಮಾಡುತ್ತೇವೆ. ಇದು ಅನಾಹುತಕ್ಕೆ ಕಾರಣವಾಗುತ್ತದೆ’ ಎಂದರು.

‘ಒಬ್ಬ ವ್ಯಕ್ತಿಯ ಬಗ್ಗೆ ತೀರ್ಮಾನಕ್ಕೆ ಬರುವ ಮೊದಲು ಸಾಕಷ್ಟು ಯೋಚಿಸಬೇಕು. ಯಾವ ವಿಷಯದ ಬಗ್ಗೆಯೂ ತೀರ್ಮಾನಕ್ಕೆ ಬರುವಾಗ ಅವಸರ ಮಾಡದೇ ಹಲವು ಬಾರಿ ಪರಾಮರ್ಶೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಚ್.ಸಿ.ಆಕಾಶ್ ಹಾಗೂ ಆದಿತ್ಯ.ಎಚ್.ಸಿ ಗಮಕ ವಾಚನ ನಡೆಸಿಕೊಟ್ಟರು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ, ಆಂಜನೇಯನಿಗೆ ತ್ರಿಮಧುರಯುಕ್ತ ಬಾಳೆಹಣ್ಣಿನ ಹವನವನ್ನು ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.