ಶಿರಸಿ: ‘ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ರಾಜೀನಾಮೆ ನೀಡುವಂತೆ ಬಿಜೆಪಿಯವರು ಪದೇ ಪದೇ ಹೇಳಿಕೆ ನೀಡಿದರೆ, ಅವರ ಮನೆ ಎದುರೇ ಹೆಬ್ಬಾರ್ ಪರಿವಾರದ ಸದಸ್ಯರೆಲ್ಲ ಜತೆಗೂಡಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗದ ಮುಖ್ಯಸ್ಥ ದ್ಯಾಮಣ್ಣ ದೊಡ್ಮನಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಬಿಜೆಪಿಯಿಂದ ಹೊರ ಬಂದ ನಾವು ಹೆಬ್ಬಾರ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದೇವೆ. ಹೆಬ್ಬಾರ್ ಪರಿವಾರವಾಗಿ ನಾವಿದ್ದೇವೆ. ಬಿಜೆಪಿಯ ಕೆಲವರಲ್ಲಿ ಸೈದ್ಧಾಂತಿಕ ಬದ್ಧತೆಯಿಲ್ಲ. ಹೆಬ್ಬಾರ್ ಪಕ್ಷ ಬಿಡುವಂತೆ ಹೇಳಲು ಅಂಥವರಿಗೆ ನೈತಿಕತೆ ಇಲ್ಲ. ಶಾಸಕ ಹೆಬ್ಬಾರ್ ತಪ್ಪೆಸಗಿದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆ ಹೊರತು ರಾಜೀನಾಮೆ ಕೇಳುವುದಲ್ಲ. ಇದನ್ನು ಮೊದಲು ಬಿಜೆಪಿಗರು ತಿಳಿದುಕೊಳ್ಳಬೇಕು’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರೇ ಹೆಬ್ಬಾರ್ ಅವರನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಹೆಬ್ಬಾರ್ ಬೆಂಬಲಿಗರು ಅವರನ್ನು ಗೆಲ್ಲಿಸಿದರು. ಪಕ್ಷದ್ರೋಹಿಗಳಿಗೆ ಪಾಠ ಕಲಿಸಲಾಗದ ಬಿಜೆಪಿಯವರು ಈಗ ಹೆಬ್ಬಾರ್ ಅವರನ್ನು ಹೊರಹಾಕಲು ಪ್ರಯತ್ನ ನಡೆಸಿದ್ದಾರೆ’ ಎಂದು ಅವರು ಟೀಕಿಸಿದರು.

ಬಳಗದ ರಾಘು ನಾಯ್ಕ ಗುಡ್ನಾಪುರ, ಪ್ರಶಾಂತ ಗೌಡ, ಪ್ರಕಾಶ ಬಂಗ್ಲೆ, ಸುಧಾಕರ ನಾಯ್ಕ, ರಾಜು ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.